Site icon Ullalavani

ಬಜ್ಪೆ : ನಾಲ್ವರ ತಂಡದಿಂದ ಯುವಕನಿಗೆ ಚೂರಿ ಇರಿತ…!

ನಾಲ್ವರ ತಂಡದಿಂದ ಯುವಕನೋರ್ವನಿಗೆ ಚೂರಿ ಇರಿತ ಆಗಿರುವ ಘಟನೆ ಬಜ್ಪೆಯಲ್ಲಿ ನಡೆದಿದೆ.

ಬೈಕ್ ನಲ್ಲಿ ಚಾಕು ಹಿಡಿದುಕೊಂಡು ಹೋಗುತ್ತಿದ್ದವರ ವಿಡಿಯೋ ಮಾಡಲು ಅಖಿಲೇಶ್ ಎಂಬ ಯುವಕ ಅವರ ಹಿಂದೆ ಹೋಗಿದ್ದಾನೆ. ಈ ವೇಳೆ ನಾಲ್ವರ ತಂಡ ಎಡಪದವು ಪೂಪಡಿ ಕಲ್ಲು ನಿವಾಸಿ ಅಖಿಲೇಶ್ ಮೇಲೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಪರಾರಿಯಾಗಿದ್ದು, ಓರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಗೆ ನಿಖರ ಕಾರಣ ಪೊಲೀಸರು ತನಿಖೆ ಬಳಿಕ ತಿಳಿದುಬರಬೇಕಿದೆ.

Exit mobile version