ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆ ಬಳಿ ಕಾರಿನಲ್ಲಿ ಬಂದ ತಂಡ ಸ್ಕೂಟರ್‍ಗೆ ಕಾರನ್ನು ಡಿಕ್ಕಿ ಹೊಡೆದು ಸಂತೋಷ್‍ನಗರ ನಿವಾಸಿ ಲ್ಯಾನ್ಸಿ ಎಂಬಾತನಿಗೆ ಯದ್ವಾತದ್ವಾ ತಲವಾರಿನಿಂದ ಕಡಿದು ಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ಲ್ಯಾನ್ಸಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೊಕ್ಕೊಟ್ಟಿನಿಂದ ಚೆಂಬುಗುಡ್ಡೆ ಕಡೆ ಲ್ಯಾನ್ಸಿ ತನ್ನ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಚೆಂಬುಗುಡ್ಡೆ ಕಡೆಯಿಂದ ಏಕಾಏಕಿ ಆಗಮಿಸಿದ ಸ್ವಿಫ್ಟ್ ಕಾರು ಲ್ಯಾನ್ಸಿ ಸ್ಕೋಟರ್‍ಗೆ ಡಿಕ್ಕಿ ಹೊಡೆದು ಕೆಳಗೆ ಬಿದಿದ್ದ ಲ್ಯಾನ್ಸಿಯ ಮೇಲೆ ತಲವಾರಿನಿಂದ ಯದ್ವಾತದ್ವಾ ಕಡಿದು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ.
ತಲವಾರು ಪತ್ತೆ : ಘಟನಾ ಸ್ಥಳದಲ್ಲಿ ಹತ್ಯೆ ಯತ್ನಕ್ಕೆ ಬಳಸಿದ್ದ ಎರಡು ತಲವಾರು ರಕ್ತಸಿಕ್ತವಾಗಿ ದೊರಕಿದ್ದು, ಕಾರಿನೊಳಗೆ ಮೂರಕ್ಕೂ ಹೆಚ್ಚು ತಲವಾರು ಪತ್ತೆಯಾಗಿದೆ.
ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಯತೀಶ್ 2014ರ ಆಗಸ್ಟ್ 15ರಂದು ತೊಕ್ಕೊಟ್ಟಿನ ಮಾಯಾ ಬಾರ್‍ನ ಎದುರು ಕೊಲೆಯಾಗಿದ್ದು ಈ ಕೊಲೆಗೆ ಸಂಬಂಧಿಸಿದಂತೆ ಲ್ಯಾನ್ಸಿ ಎರಡನೇ ಆರೋಪಿಯಾಗಿದ್ದ. ಇಂದು ನಡೆದ ಕೊಲೆ ಯತ್ನ ಯತೀಶ್ ಕೊಲೆಗೆ ಪ್ರತಿಕಾರವಾಗಿದೆ ಎಂದು ಪೆÇಲೀಸರು ಶಂಕಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿ ಲ್ಯಾನ್ಸಿ :
ಕೈಗೆ ಮತ್ತು ತಲೆಗೆ ತಲವಾರಿನಿಂದ ಕಡಿದ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹಾಡು ಹಗಲೇ ಈ ಘಟನೆ ನಡೆದಿರುವುದು ಎಲ್ಲರನ್ನು ಬೆಚ್ಚಿ ಬಿಳೀಸುವಂತೆ ಮಾಡಿದೆ. ಸಂಜೆಯ ವೇಳೆಗೆ ಈ ಘಟನೆ ನಡೆದಿರುವುದರಿಂದ ಚೆಂಬುಗುಡ್ಡೆ ಬಳಿ ಸಂಚಾರ ಅಸ್ತವ್ಯಸ್ತಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ಉಳ್ಳಾಲ ಪೆÇಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.