ಉಳ್ಳಾಲ : ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಮಂಗಳೂರಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ 6ನೇ ಪದವಿ ಪ್ರದಾನ ಸಮಾರಂಭವು ನವೆಂಬರ್ 25 ಮಂಗಳವಾರ ಮತ್ತು 26 ರ ಬುಧವಾರದಂದು ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯ ಆವರಣದ ಯೆಂಡ್ಯೂರೆನ್ಸ್ ವೇದಿಕೆಯಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
ಈ ಎರಡು ದಿನಗಳ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 1,863 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.
ನವೆಂಬರ್ 25 ರಂದು ಬಿಬಿಎ, ಬಿಕಾಂ, ಎಂಬಿಎ, ಎಂ.ಎಸ್‌ಸಿ (ಕಂಪ್ಯೂಟರ್ ಸೈನ್ಸ್, ಆಹಾರ ತಂತ್ರಜ್ಞಾನ), ಎಂಎಸ್ಥಬ್ಲೂ, ಬಯೋ–ಸೈನ್ಸ್ ಮತ್ತು ಕಂಪ್ಯೂಟೇಶನಲ್ ಬಯಾಲಜಿ ವಿಭಾಗಗಳ ಪದವೀಧರರಿಗೆ ಪದವಿ ಪ್ರದಾನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮೈಸೂರಿನ ಎಸ್‌ಡಿಎಂ ಐಎಂಡಿ ನಿರ್ದೇಶಕ ಡಾ. (ಲೆಫ್ಟಿನೆಂಟ್ ಕರ್ನಲ್) ಪ್ರಸಾದ್ ಎಸ್.ಎನ್.ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ–ವೈಸ್–ಚಾನ್ಸೆಲರ್ ಡಾ. ಬಿ.ಎಚ್. ಶ್ರೀಪತಿ ರಾವ್ ವಹಿಸಲಿದ್ದಾರೆ.
ಯೆನೆಪೋಯ ಇಂಟರ್‌ನ್ಯಾಶನಲ್ ಸ್ಕೂಲ್ (ಕೆಎಸ್‌ಎ) ಸಿಇಒ ಪ್ರೊ. ಅರುಣ್ ಎ. ಭಾಗವತ್ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ನವೆಂಬರ್ 26 ರಂದು ಬಿಸಿಎ, ಬಿಎಸ್ಸಿ, ಎಂಸಿಎ ಮತ್ತು ಎಂ.ಎಸ್‌ಸಿ ವಿಭಾಗಗಳ ಪದವೀಧರರಿಗೆ ಪದವಿ ಪ್ರದಾನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಪ್ರೊ. ಬಿ. ರವಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಯುಪಿಸಿಎಲ್–ಅದಾನಿ ಪವರ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವಮತ್ತು ಯೆನೆಪೋಯ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕ ಡಾ. ಬಿ.ಟಿ. ನಂದೀಶ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ (ಪ್ರಭಾರ) ಪ್ರೊ. ಜೀವನ್ ರಾಜ್, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಹಾಗೂ ಉಪ ಪ್ರಾಂಶುಪಾಲರಾದ ಪ್ರೊ. ಶರೀನಾ ಪಿ., ಉಪ ಪ್ರಾಂಶುಪಾಲರಾದ ನಾರಾಯಣ್ ಸುಕುಮಾರ್ ಎ, ಡೀನ್‌ಗಳು, ವಿಭಾಗ ಮುಖ್ಯಸ್ಥರು ಹಾಗೂ ಎಸಿಒಇ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ