Site icon Ullalavani

ಉಳ್ಳಾಲ: ಯುವಕ ನಾಪತ್ತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಉಳ್ಳಾಲ ಸುಂದರಿಭಾಗ್ ನಿವಾಸಿ ಮಹಮ್ಮದ್ ಅನ್ವರ್ (31) ಎಂಬವರು ಸೆ. 6 ಆದಿತ್ಯವಾರ ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾರೆ.

ಮಹಮ್ಮದ್ ಅನ್ವರ್‍ರವರಿಗೆ ವಿವಾಹ ನಿಶ್ಚಯವಾಗಿದ್ದು, ಇವರ ಸಹೋದರ ಮೊಹಮ್ಮದ್ ಫಾರೂಕ್ ಮದುವೆಯ ಆಮಂತ್ರಣ ಪತ್ರ ಹಂಚಲೆಂದು ಹೊರಗಡೆ ತೆರಳಿದ್ದು ಮಧ್ಯಾಹ್ನ 2.30ಕ್ಕೆ ಮನೆಗೆ ಬಂದಾಗ ಅನ್ವರ್ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಬಂಧಿಕರ ಮನೆಗಳಲ್ಲೂ ವಿಚಾರಿಸಿದಾಗ ಅಲ್ಲೂ ಪತ್ತೆಯಾಗದೆ ನಂತರ ಅನ್ವರ್ ತಂದೆ ಮೊಹಮ್ಮದ್ ಮಗನ ನಾಪತ್ತೆಯಾದ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Exit mobile version