Site icon Ullalavani

ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾಗಿ ಜೀವನ್ ಕುಮಾರ್ ತೊಕ್ಕೊಟು ಪುನರಾಯ್ಕೆ

ತೊಕ್ಕುಟ್ಟು, ನ.22: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ತೊಕ್ಕೊಟಿನ ಕ್ಲಿಕ್ ಸಭಾಂಗಣದಲ್ಲಿ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಚುನಾವಣಾಧಿಕಾರಿಯಾಗಿ ಪ್ರತಿಷ್ಠಾನದ ಗೌರವ ಸಲಹೆಗಾರರು ಆನಂದ ಕೆ.ಅಸೈಗೋಳಿ ಯವರು ಮುಂದಿನ ಎರಡು ವರುಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.

ಅಧ್ಯಕ್ಷರಾಗಿ ಜೀವನ್ ಕುಮಾರ್ ತೊಕ್ಕೊಟು ಆಯ್ಕೆಯಾಗಿದ್ದು,ಗೌರವ ಸಲಹೆಗಾರರಾಗಿ ಆನಂದ ಕೆ.ಅಸೈಗೋಳಿಯನ್ನು ಆರಿಸಲಾಯಿತು. ಗೌರವಧ್ಯಕ್ಷರಾಗಿ ರಾಕೇಶ್ ಕುಮಾರ್, ಉಪಾಧ್ಯಕ್ಷರುಗಳಾಗಿ ಮಾಧವ ಉಳ್ಳಾಲ, ದಾಮೋದರ ನಡಾರ್, ಪ್ರವೀಣ್ ಬಸ್ತಿ, ಹರೀಶ್ ಅಂಬ್ಲಮೊಗರು, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕಾಪಿಕಾಡ್, ಕೋಶಾಧಿಕಾರಿಯಾಗಿ ಪ್ರಸಾದ್ ಕೊಂಡಾಣ, ಕಾರ್ಯದರ್ಶಿಯಾಗಿ ದೀಕ್ಷಿತ್ ನಿಸರ್ಗ ಕುಂಪಲ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರಣ್ ಕೊಲ್ಯ, ಜತೆ ಕಾರ್ಯದರ್ಶಿಯಾಗಿ ಕೃಷ್ಣ ಪೊನ್ನೆತೋಡು, ಸಂಘಟನಾ ಕಾರ್ಯದರ್ಶಿ ಯಾಗಿ ರಮೇಶ್ ಸಾಮಾನಿ, ಜತೆ ಸಂಘಟನಾ ಕಾರ್ಯದರ್ಶಿ ನವೀನ್ ಎ.ಕೆ., ಲಕ್ಷ್ಮೀನಾರಾಯಣ, ವೃಕ್ಷಾಂಕುರ ರಕ್ಷಾ ಸಂಚಾಲಕರಾಗಿ ರಾಜೇಂದ್ರ ಸೇವಂತಿಗುಡ್ಡೆ, ಗುರುವಂದನೆ ಸಂಚಾಲಕರಾಗಿ: ಮೋಹನ್ ಸಾಲ್ಯಾನ್, ಸ್ವಚ್ಚತಾ ಸಂಚಾಲಕರಾಗಿ: ನಟರಾಜ್, ಮಾಧ್ಯಮ ಸಂಚಾಲಕರಾಗಿ ಸುಧಾಕರ ಬಜಾಲ್, ಕಾರ್ಯಕಾರಿ ಸದಸ್ಯರುಗಳಾಗಿ ಶಿವಾಜಿ ಕುತ್ತಾರು, ಶರತ್ ಭಂಡಾರಿ, ಗಂಗಾಧರ ಅಂಬ್ಲಮೊಗರು, ಚಂದ್ರ ಶೇಖರ್ ಕೊಲ್ಯ, ವಿಶ್ವನಾಥ ಏಲ್ಯಾರ್ ಪದವು, ಗೋಪಿನಾಥ್ ಬಗಂಬಿಲ, ನಾಗೇಶ್ ಪೂಜಾರಿ ಬೆಳ್ಮ, ಚೇತನ್ ಬೈಪಾಸ್, ಸತೀಶ್ ಪೂಜಾರಿ, ಬೃಜೇಶ್ ನಾಯರ್,ಪ್ರವೀಣ್ ರೈ, ನವೀನ್ ಅಡ್ಕ ಆಯ್ಕೆಯಾಗಿದ್ದಾರೆ.

Exit mobile version