Site icon Ullalavani

ಮಾಡೂರು ಶಾಲಾ ಕ್ರೀಡೋತ್ಸವ 2025 ಕಾರ್ಯಕ್ರಮಕ್ಕೆ ಚಾಲನೆ


ಉಳ್ಳಾಲ:ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಮಾಡೂರು ಇದರ ಶಾಲಾ ಕ್ರೀಡೋತ್ಸವ 2025 ಕಾರ್ಯಕ್ರಮ ಮಾಡೂರು ಮೈದಾನದಲ್ಲಿ ನಡೆಯಿತು.


ಪಾರಿವಾಳ ಹಾಗೂ ಬಲೂನ್ ನನ್ನು ಆಕಾಶಕ್ಕೆ ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು
ತಲಪಾಡಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಗಣೇಶ್ ಭಟ್ ತಲಪಾಡಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿ ,ಶಿಕ್ಷಕರು ಎಂಟು ಗಂಟೆ ಮಕ್ಕಳನ್ನು ಸಾಕಿ ಬೆಳೆಸುತ್ತಾರೆ. ಪೋಷಕರು ಮಕ್ಕಳನ್ನು ಶಿಕ್ಷಕರಿಗೆ ಬಿಟ್ಟು ಕೊಡಬೇಕು. ಶಿಕ್ಷಕರು ಅವರನ್ನು ಉನ್ನತ ಹಂತಕ್ಕೆ ತಲುಪಿಸುತ್ತಾರೆ. ಶಿಕ್ಷಣ, ಮಕ್ಕಳು ಬೆಳೆಯಬೇಕು, ಇದಕ್ಕೆ ನಾವು ಪ್ರೋತ್ಸಾಹ ನೀಡಬೇಕು . ಅವರು ದೇಶದ ಉತ್ತಮ ಪ್ರಜೆ ಆಗಬೇಕು ಎಂದರು.


ಮಂಗಳೂರು ದಕ್ಷಿಣ ವಲಯ ಶಿಕ್ಷಣ ಕೇಂದ್ರದ ಬಿಆರ್ ಪಿ ಸುಜಾತ ಮಾತನಾಡಿ, ಮಕ್ಕಳ ಸಂಖ್ಯೆ ಹೆಚ್ಚಾಗಲು ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಮುಖ್ಯ.ಸರಕಾರಿ ಶಾಲೆಯನ್ನ ಉನ್ನತೀಕರಿಸಲು ಎಲ್ಲರ ಶ್ರಮ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಭೂಮಾಪಕರ ಸಂಘದ ಅಧ್ಯಕ್ಷ ನಾಗರಾಜ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ವಿದ್ಯಾರ್ಥಿಗಳ ಸಾಮೂಹಿಕ ಪಥ ಸಂಚಲನ, ಅಂಗನವಾಡಿ ವಿದ್ಯಾರ್ಥಿಗಳ ಸಾಮೂಹಿಕ ಕವಾಯತು, ಎಲ್ ಕೆಜಿ ಯುಕೆ ಜಿ ವಿದ್ಯಾರ್ಥಿಗಳಿಂದ ನಲಿಕಲಿ , ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಕವಾಯತು, ನಡೆಯಿತು.
ಕೋಟೆಕಾರ್ ಪ.ಪಂ.ಕೌನ್ಸಿಲರ್ ಸುಜಿತ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಈ ಕಾರ್ಯಕ್ರಮ ದಲ್ಲಿ ಪದ್ಮಾವತಿ ಶೆಟ್ಟಿ, ಚಂದ್ರ ಹಾಸ್ ಉಳ್ಳಾಲ, ಮಾಜಿ ಕೌನ್ಸಿಲರ್ ಹಮೀದ್ ಹಸನ್ ಮಾಡೂರು, ಶಶಿಧರ ಪೂಂಜಾ, ಚಂದ್ರ ಶೇಖರ್ ಶೆಟ್ಟಿ, ಚಿದಾನಂದ ಮಡ್ಯಾರ್, ಕಿರಣ್, ಅಝೀಝ್ ಮಾಡೂರು, ಭಾಸ್ಕರ್ ಮಡ್ಯಾರ್ , ರಾಷ್ಟ್ರೋತ್ಥಾನ ವಿದ್ಯಾ ಸಂಸ್ಥೆ ಯ ದೈಹಿಕ ಶಿಕ್ಷಕ ಮಾಲಾಶ್ರೀ,ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ ಯು.ಸ್ವಾಗತಿಸಿದರು.ಪುರುಷೋತ್ತಮ ಗಟ್ಟಿ ಕಾಚಾರ್ ನಿರೂಪಿಸಿದರು. ಶಿಕ್ಷಕಿ ಜೀವಿತ ವಂದಿಸಿದರು

Exit mobile version