Site icon Ullalavani

ಅಪಘಾತದಲ್ಲಿ ಮರಣ ಹೊಂದಿದ ಮೂವರ ಕುಟುಂಬಕ್ಕೆ ಗರಿಷ್ಠ ಪ್ರಮಾಣದಲ್ಲಿ ಸಹಾಯ ನೀಡಲು ಸರಕಾರಕ್ಕೆ ಸ್ಪೀಕರ್ ಮೂಲಕ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾತ್ ಕರ್ನಾಟಕ ಮನವಿ

ಮಂಗಳೂರು: ಮೊಂಟೆಪದವು ನಿವಾಸಿಗಳಾಗಿದ್ದ ಮರಿಕ್ಕಳ ಜಮಾಅತಿಗೆ ಒಳಪಟ್ಟ ಸುನ್ನೀ ಕಾರ್ಯಕರ್ತರಾದ ಇಬ್ರಾಹಿಮ್ ಬಟ್ಯಡ್ಕ . ಅಟೋ ಚಾಲಕ ಮನ್ಸೂರ್ ಮರಿಕ್ಕಳ ಅಬೂಬಕ್ಕರ್ ಮೊಂಟೆಪದವು ಅವರು ಇತ್ತೀಚೆಗೆ ಮಂಗಳೂರಿನ ಪಣಂಬೂರಿನಲ್ಲಿ ನಡೆದ ಅಪಘಾತದಲ್ಲಿ ಮರಣ ಹೊಂದಿದ್ದು , ಆ ಕುಟುಂಬದ ಮನೆಗೆ ಸುನ್ನೀ ಸಂಯುಕ್ತ ಜಮಾಅತ್ ಕರ್ನಾಟಕ ಇದರ ನಾಯಕರು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ವಿಷೇಶ ಪ್ರಾರ್ಥನೆ ನಡೆಸಿದ್ದಾರೆ.


ಅದಾದ ಬಳಿಕ ನ.18 ಮಂಗಳವಾರ ಬೆಳಿಗ್ಗೆ ದೀವಾನ್ -ಇ -ಖಾಝಿ ಸುನ್ನಿ ಸಂಯುಕ್ತ ಜಮಾಅತ್ ಕರ್ನಾಟಕ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಪ್ರಧಾನ ಕಾರ್ಯದರ್ಶಿ ಆಶ್ರಫ್ ಸಅದಿ ಮಲ್ಲೂರು ನೇತೃತ್ವದಲ್ಲಿ ಆ ಕುಟುಂಬಕ್ಕೆ ಗರಿಷ್ಠ ಸಹಾಯವನ್ನು ಸರಕಾರ ನೀಡಬೇಕು ಎಂದು ಕರ್ನಾಟಕ ವಿಧಾನ ಸಭಾದ್ಯಕ್ಷರಾದ ಯು.ಟಿ ಖಾದರ್ ರವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಸಿದ್ದೀಖ್ ಸಖಾಫಿ ಮೂಳೂರು,ಬದ್ರುದ್ದೀನ್ ಅಝ್ಹರಿ ಕೈಕಂಬ, ಹೈದರ್ ಅಲಿ ಹಿಮಮಿ ಮಲಾರ್ ಉಪಸ್ಥಿತರಿದ್ದರು

Exit mobile version