Site icon Ullalavani

ವಯೋಸಹಜ ಕಾಯಿಲೆಯಿಂದ ಭಂಡಾರ ಬೈಲ್ ಪದ್ಮಪ್ಪ ನಾಯ್ಕ್ ನಿಧನ

ಕುತ್ತಾರ್: ಮುನ್ನೂರು ಗ್ರಾಮ ಕುತ್ತಾರ್ ಭಂಡಾರ ಬೈಲ್ ಪದ್ಮಪ್ಪ ನಾಯ್ಕ್ ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದ್ದಾರೆ.


ಪದ್ಮಪ್ಪ ನಾಯ್ಕ್ ಮಂಗಳೂರು ಹೆಂಚಿನ ಕಾರ್ಖಾನೆಯಲ್ಲಿ ದುಡಿಯುತ್ತ ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು. ಮಾತ್ರವಲ್ಲ ಕಾರ್ಮಿಕರನ್ನು ಪಕ್ಷ ಸದಸ್ಯರಾಗಿ ಮಾಡಿ ಸಿಪಿಎಂ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದರು. ಸ್ಥಳೀಯವಾಗಿ ಸಾಮಾಜಿಕ ಚಟುವಟಿಕೆಯ ಮುಖಾಂತರ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿ ಗುರುತಿಸಿ ಕೊಂಡಿದ್ದರು.
ಮೃತರ ಅಂತಿಮ ದರ್ಶನ ಅವರ ಸ್ವಲ್ಪ ಗೃಹದಲ್ಲಿ ನಡೆದ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಗೌರವ ಸಲ್ಲಿಕೆ ನಡೆಸಲಾಯಿತು.


ಪಕ್ಷದ ಜಿಲ್ಲಾ, ಮತ್ತು ಸ್ಥಳೀಯ ಮುಖಂಡರುಗಳಾದ ಸುಕುಮಾರ್ ತೊಕ್ಕೊಟ್ಟು, ಕೃಷ್ಣಪ್ಪ ಸಾಲಿಯಾನ್, ಆನಂದ ದೇಸೋಡಿ, ವಿಶ್ವನಾಥ್ ತೇವುಲ, ಜಯಂತ್ ನಾಯ್ಕ್, ಮಹಾಬಲ್ ದೆಪ್ಪೆಲಿಮಾರ್, ಶೇಖರ್ ಕುಂದರ್, ವಿಕಾಸ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.

Exit mobile version