Site icon Ullalavani

ನಿರoತರ 40 ಗಂಟೆಗಳ ಸಂಗೀತೋತ್ಸವ; ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ…!

ಮಂಗಳೂರು; ನಿರoತರ 40 ಗಂಟೆಗಳ ಕಾಲ ಹಾಡುವ ಮೂಲಕ ತಂಡವೊoದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದೆ.

ಹೌದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್, ಜೀ ಕನ್ನಡದ ಸರಿಗಮ ಖ್ಯಾತಿಯ ಯಶವಂತ್ ಎಂ.ಜಿ. ಮಾರ್ಗದರ್ಶನದಲ್ಲಿ ಶೋಡಶಿ ಫೌಂಡೇಶನ್ ವತಿಯಿಂದ, ಭಾರತೀಯ ಸಂಗೀತ ಲೋಕದ ಗಾಯಕ ದಿ.ಕಿಶೋರ್ ಕುಮಾರ್ ಅವರ ಗೌರವಾರ್ಥವಾಗಿ ಮಂಗಳೂರು ಪುರಭವನದಲ್ಲಿ “ಗಾತಾ ರಹೇ ಮೇರಾ ದಿಲ್ ” ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಡಿ ವೈ ಎಸ್ ಪಿ ಮಹೇಶ್ ಕುಮಾರ್ ಚಾಲನೆ ನೀಡಿದರು. ಮಹಾ ಸಂಗೀತ ಸಂಭ್ರಮದಲ್ಲಿ ನೂರಮೂವತ್ತಕ್ಕೂ ಹೆಚ್ಚು ಹಾಡುಗಾರರು ಭಾಗಿಯಾಗಿದ್ದು, ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಕಿಶೋರ್ ಕುಮಾರ್ ಅವರ ಪ್ರಮುಖ ಗೀತೆಗಳೊಂದಿಗೆ 40 ಗಂಟೆಗಳ ನಿರಂತರ ಗಾಯನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕದ ಪ್ರಖ್ಯಾತ ಹಾಗೂ ಗೌರವಾನ್ವಿತ ಗಾಯಕರಿಂದ ನಡೆಸಲಾಗಿದ್ದು, ಸಂಗೀತಾಭಿಮಾನಿಗಳಿಗೆ ಸಾಂಸ್ಕೃತಿಕ ಹಬ್ಬದಂತೆಯೇ ಸಂಭ್ರಮ ನೀಡಿತು. ದಾಖಲೆ ಪೂರೈಸಿದ ಷೋಡಶಿ ಫೌಂಡೇಶನ್ ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನ ಮನೀಷ್ ಬಿಷ್ಣೋಯ್, ಶಾಸಕರಾದ ವೇದವ್ಯಾಸ ಕಾಮತ್ ಪ್ರಮಾಣ ಪತ್ರ ವಿತರಿಸಿದ್ರು.

ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಈ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ದೇವಸ್ಥಾನಗಳಲ್ಲಿ ನಿರಂತರ ಭಜನೆ ಕೂಡಾ ನಡೆಯುತ್ತದೆ. ಆದರೆ ಆಧ್ಯಾತ್ಮಿಕ ಕಾರಣಕ್ಕಾಗಿ ಅದನ್ನು ದಾಖಲೆಗೆ ಬಳಸುವುದಿಲ್ಲ. ಇಂತಹ ಸಾಧನೆಗಳು ಮತ್ತಷ್ಟು ನಡೆಯಬೇಕು. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ಷೋಡಶಿ ಸಂಸ್ಥೆಯ ಸ್ಥಾಪಾಕಾಧ್ಯಕ್ಷರಾದ ಭರತ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದ್ದಾರೆ. ಇದೇ ವೇಳೆ ಯಶ್ವಂತ್ ಎಂ.ಜಿ, ಡಾ.ಮನೀಷ್ ಬಿಷ್ಣೋಯ್, ಲಂಚುಲಾಲ್, ಮಣಿಕಾಂತ ಕದ್ರಿ, ರಮೇಶ್ ಚಂದ್ರ, ಶ್ರೀಕಾಂತ ಕಾಮತ್, ವೇಣುಗೋಪಾಲ್ ಪುತ್ತೂರು, ರಂಜನ್ ದಾಸ್ , ವಿಶ್ವಾಸ್ ಗುರುಪುರ, ಸತೀಶ್ ಇರಾ, ಡಾ ಶಿವರಾಮ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಫೇಮಸ್ ಸಿಂಗರ್ ಮಣಿಕಾಂತ ಕದ್ರಿ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಮಾಡಿರುವುದಕ್ಕೆ ಹೆಮ್ಮೆ ಇದೆ. ಇನ್ನಷ್ಟು ಕಾರ್ಯಕ್ರಮಗಳು ನಡೆಯಲಿದೆ, ಎಸ್ಪಿಬಿ, ರಾಜ್‌ಕುಮಾರ್ ಅವರ ಹಾಡುಗಳೂ ಇರಲಿ ಅಂತ ಹೇಳಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಡಾ. ಮನೀಷ್ ಬಿಷ್ಣೋಯ್, ಡಾ. ಶಿವರಾಮ್ ಕೆ. ಭಂಡಾರಿ,ರಮೇಶ್ ಚಂದ್ರ, ರಮೇಶ್. ಕೆ . ಪಾಟೀಲ್, ಅನಿಲ್ ಶೆಟ್ಟಿ ಸೂರಿಂಜೆ, ಮನೋಹರ್ ಶೆಟ್ಟಿ, ಗೋಪಾಲ ಕೃಷ್ಣ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದಾರೆ.

Exit mobile version