ಉಳ್ಳಾಲ ನಗರ ಸಭೆಯಲ್ಲಿ ಸತತವಾಗಿ ದಾಖಲೆ 6 ಬಾರಿ ಸದಸ್ಯರಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸಾಧನೆಯನ್ನು ಗುರುತಿಸಿ 2025-26ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾಗಿದ್ದ ಹಾಲಿ ಸದಸ್ಯ ಮೊಹಮ್ಮದ್ ಮುಕ್ಕಚೇರಿ ಯವರು ಅನಾರೋಗ್ಯಕ್ಕಾಗಿ ಕಣಚೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರಿಗೆ ಜಿಲ್ಲಾಡಳಿತದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯ ಆಗಿರಲಿಲ್ಲ .
ಇದೀಗ ಜಿಲ್ಲಾಧಿಕಾರಿ ಗಳ ಪ್ರತಿನಿಧಿಯಾಗಿ ಸಹಾಯಕ ಜಿಲ್ಲಾಧಿಕಾರಿ ಯವರು ಇಂದು ಕಣಚೂರ್ ಆಸ್ಪತ್ರೆಗೆ ಭೇಟಿ ಮೊಹಮ್ಮದ್ ಮುಕ್ಕಚೇರಿ ಯವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರಿಗೆ ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿ ಮೊಹಮ್ಮದ್ ಮುಕ್ಕಚೇರಿ ರನ್ನು ಶಾಲು ಹೊದಿಸಿ ಆಕರ್ಷಕ _ನಗದು ಬಹುಮಾನದೊಂದಿಗೆ ಸನ್ಮಾನಿಸಿ ಶೀಘ್ರ ಆರೋಗ್ಯ ಚೇತರಿಸಿ ಕೊಳ್ಳಲು ಹಾರೈಸಿತು .
ನಿಯೋಗದಲ್ಲಿ ಬ್ಲಾಕ್ ಅಧ್ಯಕ್ಷ ರಮೇಶ್ ಶೆಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್,ಸಿಟಿ ಕಾಂಗ್ರೆಸ್ ಅಧ್ಯಕ್ಷ ಮುಸ್ತಫ ಅಬ್ದುಲ್ಲಾ,ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಅಮಿತಾ ಅಶ್ವಿನ್, ಸುರೇಖಾ ರಝಿಯಾ ಇಬ್ರಾಹಿಂ, ಶ್ರೀಮತಿ ಪ್ರೇಮ, ನಗರ ಸಭಾ ಸ್ಥಾಯಿ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಇಬ್ರಾಹಿಂ ಅಶ್ರಫ್, ಉಸ್ಮಾನ್ ಕಲ್ಲಾಪು, MFC ಅಸೋಸಿಯೇಷನ್ ಇದರ ಗೌರವಾಧ್ಯಕ್ಷ ಅಬ್ದುಲ್ ರಝಾಕ್, ರಾಜ ಬಂಡಸಾಲೆ, ಅಬ್ದುಲ್ ರಹ್ಮಾನ್ ( ಅಣ್ಣಾಮ) ಇಬ್ರಾಹಿಂ ಮಾರ್ಗತ್ತಲೆ UTs _ಫ್ಯಾನ್ ಕ್ಲಬ್ ಇದರ ಅಧ್ಯಕ್ಷ ಮೊಯ್ಯದ್ದೀನ್ ಉಳ್ಳಾಲ್, ಜೊತೆ ಕಾರ್ಯದರ್ಶಿ ಝಿಯಾದ್ ಇನ್ನಿತರರಿದ್ದರು
