Site icon Ullalavani

ಬ್ಯಾನರ್ ಅಳವಡಿಸುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ಪಜೀರು ನಿವಾಸಿ ಚಿಕಿತ್ಸೆ ಫಲಕಾರಿಯಾಗದೆ ಸಾವು..!

ಪಜೀರು: ಬ್ಯಾನರ್ ಅಳವಡಿಕೆ ಕೆಲಸ ನಿರ್ವಹಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸುರತ್ಕಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪಜೀರು ಗ್ರಾಮದ ಭಾಸ್ಕರ ಪೂಜಾರಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.


ನ.11 ರಂದು ಸುರತ್ಕಲ್‌ನಲ್ಲಿ ತನ್ನ ವೃತ್ತಿಯಾದ ಬ್ಯಾನರ್ ಅಳವಡಿಕೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಲೆಗೆ ಮಾರಣಾಂತಿಕವಾಗಿ ಗಾಯವಾಗಿತ್ತು. ಕೂಡಲೇ ಹತ್ತಿರದ ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ತಲೆಯ ಭಾಗಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


ಮೃತ ಭಾಸ್ಕರ್ ಪುಜಾರಿ ಕಡು ಬಡತನದ ಕುಟುಂಬದವರಾಗಿದ್ದು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಚಿಕ್ಕ ಪ್ರಾಯದಲ್ಲೇ ಕುಟುಂಬದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡವರು. ತನ್ನ ಸ್ವಂತ ಪರಿಶ್ರಮದಿಂದ ತನ್ನ ಮೂರು ಸಹೋದರಿಯರಿಗೆ ಮದುವೆ ಮಾಡಿ, ಕಳೆದ 5 ತಿಂಗಳ ಹಿಂದೆ ತೀರಾ ಬಡ ಕುಟುಂಬದ ಹುಡುಗಿಯನ್ನು ವಿವಾಹವಾಗಿರುತ್ತಾರೆ.
ಕಳೆದ ಒಂದು ವಾರದಲ್ಲಿ ಚಿಕಿತ್ಸಾ ವೆಚ್ಚ ಸುಮಾರು 7 ಲಕ್ಷದಷ್ಟು ಆಗಿರುತ್ತದೆ. ತೀರಾ ಗಂಭೀರ ಪರಿಸ್ಥಿತಿಯ ಕಾರಣ ಇನ್ನೂ ಹೆಚ್ಚಿನ ಮೊತ್ತ ಅಗತ್ಯವಿದೆ. ಮನೆಯ ಆಧಾರ ಸ್ಥಂಭವಾಗಿದ್ದ ಮಗನೇ ಆಸ್ಪತ್ರೆಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿರುವಾಗ ಇಷ್ಟೊಂದು ದೊಡ್ಡ ಮೊತ್ತ ಹಣ ಪಾವತಿಸುವುದು ಅವರ ತಾಯಿಗೆ ಅಸಾಧ್ಯವಾಗಿತ್ತು. ಗೆಳೆಯರು ಹಾಗೂ ಕುಟುಂಬಸ್ಥರು ಸಹೃದಯೀ ದಾನಿಗಳ ಮೊರೆ ಹೋಗಿದ್ದರು

Exit mobile version