Site icon Ullalavani

ನ.28 ರಿಂದ 30 ರವರೆಗೆ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ 26 ನೇ ಸ್ವಲಾತ್ ವಾರ್ಷಿಕ

ಮಂಗಳೂರು,ನ.19: ಮಂಗಳೂರು, ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್‌ನ 26ನೆ ವಾರ್ಷಿಕ ಹಾಗೂ 3ದಿವಸಗಳ ಧಾರ್ಮಿಕ ಪ್ರವಚನವು ನವಂಬರ್ .28ರಿಂದ 30ರವರೆಗೆ ರಾತ್ರಿ 8:00ಕ್ಕೆ ಮಸೀದಿಯ ಅಧ್ಯಕ್ಷ ಕೆ,ಪಿ,ಹುಸೈನ್ ಸಅದಿ ಕೆ ಸಿ ರೋಡ್ ಅಧ್ಯಕ್ಷತೆಯಲ್ಲಿ ಜರಗಲಿದೆ.

ಅಸೈಯದ್ ಶರಫುದ್ದೀನ್ ತಂಙಳ್ ಅಲ್ ಹೈದ್ರೂಸಿ ನೇತೃತ್ವವಹಿಸುವ ಕಾರ್ಯಕ್ರಮದಲ್ಲಿ ಅಲ್ ಹಿದಾಯ ಜುಮಾ ಮಸ್ಜಿದ್ ಖತೀಬ್ ಬಹು ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಮುಖ್ಯಬಾಷಣ ಮಾಡಲಿದ್ದಾರೆ.
ನವೆಂಬರ್ 29 ರಂದು ಬಹು ಅಬ್ದುರ್ರಶಿದ್ ಸಖಾಫಿ ಖಾಮಿಲ್ ತಲಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಹು ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಬಾಷಣ ಮಾಡಲಿದ್ದು, ನ.30 ರಂದು ನಡೆಯುವ ಬೃಹತ್ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಇಬ್ರಾಹಿಮ್ ಫೈಝಿ ಖತೀಬ್ 407 ಜುಮಾ ಮಸ್ಜಿದ್ ಉಚ್ಚಿಲ ನೆರವೇರಿಸಲಿದ್ದಾರೆ. ಸ್ವಲಾತ್ ನೇತೃತ್ವವನ್ನು ಹಾಗೂ ಇದೇ ವೇಳೆ ಭಾಷಣವನ್ನು
ಬಹು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಮಾಡಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಭಾಧ್ಯಕ್ಷ ಯು.ಟಿ.ಖಾದರ್ ಸುನ್ನೀ ಸಂಘಟನೆಯ ನೇತಾರರು ಉಲಮ ಉಮರಾ ನೇತಾರರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಸಿದ್ದೀಕ್ ಟಿ ಎಚ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version