ದೇರಳಕಟ್ಟೆ ನ.18: ಫಾರ್ಮಸಿ ವಿಷಯದಲ್ಲಿ ನಡೆಸಿದ ಸಂಶೋಧನೆಗಾಗಿ ಫಾರ್ಮಸ್ಯೂಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರಜೀತಾ ಬಿಜು ಅವರಿಗೆ ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಿದೆ.
ಇವರು ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ರಿಸರ್ಚ್ ಸೆಂಟರ್, ಮಂಗಳೂರು ಇವರ ಫಾರ್ಮಸ್ಯೂಟಿಕ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ‘ಚರ್ಮದ ಫಂಗಲ್ ಸೋಂಕುಗಳಿಗೆ ಚಿಕಿತ್ಸೆ ನೀಡುವ ವಿಧಾನವಾಗಿ ಕಾರ್ಬಮೈಡ್ ಮತ್ತು ಲುಲಿಕೋನಾಜೋಲ್ ನಿಯೋಸೋಮಲ್ ಜೆಲ್’ ವಿಷಯ ಕುರಿತು ಯಶಸ್ವಿ ಸಂಶೋಧನೆ ನಡೆಸಿದ ಹಿನ್ನೆಲೆ ಇವರಿಗೆ ದೇರಳಕಟ್ಟೆಯ ಯೆನೆಪೊಯ ಡೀಮ್ಡ್ ಟು ಬಿ ಯುನಿವರ್ಸಿಟಿಯು 15ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಜೀತಾ ಬಿಜು ಅವರು ಪಿಎಚ್.ಡಿ ಪದವಿಯನ್ನು ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಪ್ರಜೀತಾ ಬಿಜು ಅವರು, ತಮ್ಮ ಸಂಶೋಧನೆಯನ್ನು ಯೆನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮ್ಮದ್ ಗುಲ್ಜಾರ್ ಅಹ್ಮದ್ ಮತ್ತು ಯೆನೆಪೊಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಶೆಣೈ ಇವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದು, ಇವರ ಅಮೂಲ್ಯ ಮಾರ್ಗದರ್ಶನಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಫಾರ್ಮಸ್ಯೂಟಿಕ್ಸ್ ಮತ್ತು ಸಂಬAಧಿತ ವಿಷಯಗಳನ್ನು ಬೋಧಿಸಿದ ಅನುಭವ ಹೊಂದಿರುವ ಅವರು, ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಸದಾ ಆಸಕ್ತಿ ಹೊಂದಿದ್ದರು. ಈ ವಲಯದಲ್ಲಿ ಅವರು ಅನೇಕ ಲೇಖನಗಳನ್ನು ಪ್ರಕಟಿಸಿದ್ದು, ಕೆಲವು ಪೇಟೆಂಟ್‌ಗಳನ್ನೂ ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ.
ಪ್ರಜೀತಾ ಅವರು ತಮ್ಮ ಪಿಎಚ್.ಡಿ ಸಾಧನೆಯ ಶ್ರೇಯಸ್ಸನ್ನು ದೇವರಿಗೆ, ತಂದೆ-ತಾಯಿಗೆ, ಕುಟುಂಬದ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ಅರ್ಪಿಸಿದ್ದಾರೆ. ವಿಶ್ವವಿದ್ಯಾಲಯದ ನಿರ್ವಹಣಾ ಮಂಡಳಿ, ಇಲಾಖೆಗಳು ಹಾಗೂ ಸಂಬAಧಿತ ಎಲ್ಲರ ಸಹಕಾರ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿದರು.