Site icon Ullalavani

ಮಂಗಳೂರು ಯಾಂತ್ರಿಕ ಮೀನುಗಾರರ ಸಂಘದ ನವೀಕೃತ ಮಂಜುಗಡ್ಡೆ ಸ್ಥಾವರ ಉದ್ಘಾಟನೆ– ಪ್ರತಿಭಾ ಪುರಸ್ಕಾರ ಸಮಾರಂಭ210 ವಿದ್ಯಾರ್ಥಿಗಳಿಗೆ ರೂ.15 ಲಕ್ಷ ವೆಚ್ಚದ ಪ್ರತಿಭಾ ಪುರಸ್ಕಾರವಿತರಣೆ

ಮಂಗಳೂರು: ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ನಿಯಮಿತ (ನಂ. 6740), ಸೌತ್‌ವಾರ್ಫ್‌, ಬಂದರು, ಮಂಗಳೂರು ಇವರ ಆಶ್ರಯದಲ್ಲಿ ನವೀಕೃತ ಮಂಜುಗಡ್ಡೆ ಸ್ಥಾವರದ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನವೆಂಬರ್ 16, 2025, ಆದಿತ್ಯವಾರ, ಸಂಜೆ 4 ಗಂಟೆಗೆ ಲೋಕನಾಥ ಬೋಳಾರ್ ವೇದಿಕೆಯಲ್ಲಿ ಜರಗಲಿದೆ.
ಕಾರ್ಯಕ್ರಮವನ್ನು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರಿನ ವನ್ಸಾಲ್ ಟೆೆರಿಟರಿ ಮ್ಯಾನೇಜರ್ ವಿಪಿಎನ್ ದಾಸ್ ಉದ್ಘಾಟಿಸಲಿದ್ದಾರೆ.
ಸಂಘದ ಅಧ್ಯಕ್ಷ ವರದ್‌ರಾಜ್ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿಗಳಾಗಿ–
ತ್ರಿವೇಣಿ ರಾವ್ ಕೆ., ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಉಪವಿಭಾಗ
ಸಿದ್ಧಯ್ಯ ಡಿ., ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಮಂಗಳೂರು
ಸುಮನ ಸುಧಾಕರ್ ಬೋಳಾರ್, ಸಹಾಯಕ ಮಹಿಳಾ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಲ್ಮಠ
ರೇವತಿ ಜೆ.ಎ., ಮೀನುಗಾರಿಕೆ ಉಪ ನಿರ್ದೇಶಕರು, ಮೀನುಗಾರಿಕೆ ಬಂದರು, ಮಂಗಳೂರು
ಭಾಗವಹಿಸಲಿದ್ದಾರೆ .
ನವೀಕೃತ ಮಂಜುಗಡ್ಡೆ ಸ್ಥಾವರದ ಉದ್ಘಾಟನೆಯೊಂದಿಗೆ, 210 ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರೀ ಇಂಜಿನಿಯರಿಂಗ್ ಸೇರಿದಂತೆ ಉನ್ನತ ವ್ಯಾಸಾಂಗ ನಡೆಸುವ ಸಂಘದ ಸದಸ್ಯರ ಮಕ್ಕಳಿಗೆ ರೂ.15 ಲಕ್ಷ ವೆಚ್ಚದ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು.
ಕಾರ್ಯಕ್ರಮಕ್ಕೆ ಮಂಗಳೂರು ಯಾಂತ್ರಿಕ ಮೀನುಗಾರರ ಆಡಳಿತ ಮಂಡಳಿ, ಸೌತ್‌ವಾರ್ಫ್‌, ಬಂದರು ಮಂಗಳೂರು, ಸರ್ವರಿಗೂ ಆದರದ ಸ್ವಾಗತ ಬಯಸಿದೆ.

Exit mobile version