Site icon Ullalavani

ಉಳ್ಳಾಲ; ದಯಾನಂದ ಅವರ ಸಾವಿಗೆ ಕಾರಣವಾದ ಶ್ವಾನ ಸಾವು…!

ಉಳ್ಳಾಲ ತಾಲೂಕಿನ ಕುಂಪಲ ಮೂರುಕಟ್ಟೆಯ ನಿವಾಸಿ ದಯಾನಂದ (60) ಅವರ ಸಾವಿಗೆ ಕಾರಣವಾದ ಶ್ವಾನ ಸಾವನ್ನಪ್ಪಿದೆ. ಕುಂಪಲ ಬೈಪಾಸ್ ಸಮೀಪ ದಯಾನಂದ ಅವರ ಮೃತದೇಹ ರಕ್ತದ ಮಡುವಿನಲ್ಲಿ ಮನೆ ಅಂಗಳದಲ್ಲಿ ಪತ್ತೆಯಾಗಿತ್ತು.

ಸ್ಥಳೀಯ ಚಿಕನ್ ಅಂಗಡಿ ಬದಿಯಲ್ಲಿ ಗಾಯವಾಗಿ ಕಣ್ಣೊಂದು ಹೊರಬಿದ್ದು ಮನೆ ಅಂಗಳಕ್ಕೆ ಓಡಿ ಅಲ್ಲೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಬಳಿಕ ಹಲವಾರು ಅನುಮಾನಗಳು ಹುಟ್ಟಿಕೊಂಡವು. ಸ್ಥಳೀಯರೊಬ್ಬರು ನೋಡಿದ ಪ್ರಕಾರ ಮೃತದೇಹದ ಮೇಲೆ ನಾಯಿ ಕುಳಿತ್ತಿತ್ತು ಎಂದಿದ್ದರು. ಬಳಿಕ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಇದರ ಜೊತೆಗೆ ಫಾರೆನ್ಸಿಕ್ ತಂಡವೂ ಆಗಮಿಸಿ, ಪರಿಶೀಲನೆ ನಡೆಸಿತ್ತು. ತದನಂತರ ನಾಯಿಯೇ ದಯಾನಂದ ಅವರನ್ನು ಕೊಂದಿದೆ ಎಂಬುವುದು ದೃಡಪಟ್ಟಿತ್ತು.

ಇದೀಗ ಒರ್ವನನ್ನು ಕಚ್ಚಿ ಸಾಯಿಸಿದ ಶ್ವಾನವೂ ಸಾವನ್ನಪ್ಪಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ದಯವಿಟ್ಟು ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವಂತೆ ಸಾರ್ವಜನಿಕರು ವಿನಂತಿಸಿಕೊAಡಿದ್ದಾರೆ.

Exit mobile version