Site icon Ullalavani

ಕಾರು-ಆಕ್ಟೀವಾ ಡಿಕ್ಕಿ: ಸವಾರ ಗಂಭಿರ ಗಾಯ…!


ಪುತ್ತೂರು: ಕಾರು ಮತ್ತು ಅಕ್ಟೀವಾ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಅಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಸಂಜೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ನಡೆದಿದೆ.


ಸ್ಕೂಟರ್ ಸವಾರ ಪುತ್ತೂರು ನಗರದ ಸಾಮೆತ್ತಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ ಎಂಬವರ ಪುತ್ರ ಶಶಿಕುಮಾರ್ (36) ಗಾಯಗೊಂಡವರು.
ಮಸಾಲ ಹುಡಿಯೊಂದರ ಏಜನ್ಸಿಯಲ್ಲಿ ಕೆಲಸ ಮಾಡುತ್ತಿರುವ ಶಶಿಕುಮಾರ್ ಅವರು ಸಂಜೆ ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಪೋಳ್ಯ ತಿರುವಿನಲ್ಲಿ ಹಿಂಬಾಗದಿಂದ ಆಗಮಿಸಿದ ಕಬಕ ನಿವಾಸಿ ತೌಫೀಕ್ ಎಂಬವರು ಚಲಾಯಿಸುತ್ತಿದ್ದ ಹುಂಡೈ ಕಾರು ಸ್ಕೂಟರ್ ಗೆ ಡಿಕ್ಕಿಯಾಗಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ‌ ಸ್ಕೂಟರ್ ಸಹಿತ ರಸ್ತೆಗೆ ಎಸೆಯಲ್ಪಟ್ಟ ಶಶಿಕುಮಾರ್ ಗಾಯಗೊಂಡಿದ್ದಾರೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Exit mobile version