Site icon Ullalavani

ನವದೆಹಲಿಯಲ್ಲಿ ಬ್ಯಾಡ್ಮಿಂಟನ್ ಟೂರ್ನಮೆಂಟ್; ಅಂಬಿಕಾ ವಿದ್ಯಾಲಯ, ಶಾರದಾ ವಿದ್ಯಾಲಯ, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಭಾಗಿ

ನವದೆಹಲಿಯ ಹರಿನಗರದಲ್ಲಿರುವ ಮಹಾಶಯ ಚುನಿ ಲಾಲ್ ಸರಸ್ವತಿ ಬಾಲ್ ಮಂದಿರಲ್ಲಿ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯುತ್ತಿದ್ದು, ಅಂಬಿಕಾ ಪದವಿ ಪೂರ್ವ ವಿದ್ಯಾಲಯದ 5 ವಿದ್ಯಾರ್ಥಿಗಳು ಸ್ಪರ್ಧಿಸಲು ಹೊರಟಿದ್ದಾರೆ.

ಹೌದು, ಅಕ್ಷಜ್ ರೈ, ಆರ್ಯನ್ ಆರ್, ಎಸ್.ಅಖಿಲ್, ಸೂರ್ಯ ಪಿ ನಡಿಗೆ, ಬಿ.ಆರ್. ಸೂರ್ಯ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಇನ್ನು ಮಹಿಳೆಯರ ವಿಭಾಗದಲ್ಲಿ ವಿವೇಕಾನಂದ ಪಿ.ಯು. ಕಾಲೇಜಿನ ಹಾಗೂ ಮಂಗಳೂರಿನ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. 14-19 ವಿಭಾಗದ ಬ್ಯಾಡ್ಮಿಂಟನ್ ಸ್ಪರ್ದೆಯಲ್ಲಿ ಆರಾಧ್ಯ, ಸಿರಿ, ಶಾನ್ವಿ, ಅನ್ವಿಕಾ ರಾಜ್, ನೇಹಾಶ್ರೀ, ಸಮನ್ವಿತ, ಭೂಮಿಕಾ, ಪುಲಕಿತ ಭಾಗಿಯಾಗಲಿದ್ದಾರೆ.

ಈಗಾಗಲೇ ಈ ಎಲ್ಲಾ ವಿದ್ಯಾರ್ಥಿಗಳು ನವದೆಹಲಿಯತ್ತ ಪಯಣ ಬೆಳೆಸಿದ್ದು, ಟೂರ್ನಮೆಂಟ್‌ನಲ್ಲಿ ಭಾಗಿಯಾಗಿ ಬಳಿಕ ನ. 14 ರಂದು ವಾಪಾಸ್ಸಾಗಲಿದ್ದಾರೆ.

ಉತ್ತಮ ಕ್ರೀಡಾಪಟುಗಳಾದ ವಿದ್ಯಾರ್ಥಿಗಳು ವಿಜೇತರಾಗಿ ಪದಕಗಳನ್ನು ಗಳಿಸಿ, ತಾವು ವಿದ್ಯಾರ್ಜನೆ ಪಡೆಯುತ್ತಿರುವ ಸಂಸ್ಥೆಗೆ ಹೆಸರನ್ನು ತಂದು ಕೊಡಲಿ ಎಂಬುವುದು ಎಲ್ಲರ ಆಶಯ.

Exit mobile version