ಕುತ್ತಾರು,ನ.11: ಪ್ರಕೃತಿ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದಲ್ಲಿ ವೃಕ್ಷಾಂಕುರ ರಕ್ಷಾ ಕಾರ್ಯಕ್ರಮ ನಡೆಯಿತು.
ಕಳೆದ 8 ವರುಷಗಳಿಂದ ವೃಕ್ಷಾಂಕುರ ರಕ್ಷಾ ಕಾರ್ಯಕ್ರಮ ದಡಿಯಲ್ಲಿ ಸದಸ್ಯರ ಮನೆಯಲ್ಲಿ ಗಿಡ, ಮನೆಗೊಂದು ಗಿಡ, ವೃಕ್ಷತೋರಣ, ಗಿಡವೊಂದು ಧಾರ್ಮಿಕತೆಗೆ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿದೆ.
ಈ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು ಮಾತನಾಡಿ, ಕುತ್ತಾರಿನ ಬಾಲಸಂರಕ್ಷಣಾ ಕೇಂದ್ರದಲ್ಲಿ ಮಕ್ಕಳ ಜತೆಯಲ್ಲಿ ನೂರು ಮನಸ್ಸು ಗಿಡವೊಂದು ಕಾರ್ಯಕ್ರಮ ನಡೆಸಲು ಸಂತೋಷ ಪಡುತ್ತಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷರು, ಪರಿಸರ ಪ್ರೇಮಿ ಮಾಧವ ಉಳ್ಳಾಲ ರವರ ಮಾರ್ಗದರ್ಶನದಲ್ಲಿ, ವೃಕ್ಷಾಂಕುರ ರಕ್ಷಾ ಸಂಚಾಲಕರು ಪ್ರಸಾದ್ ಕೊಂಡಾಣ ರವರ ಮುತುವರ್ಜಿಯಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದÀರ್ಭದಲ್ಲಿ ಪ್ರತಿಷ್ಠಾನದ ಗೌರವಧ್ಯಕ್ಷರಾದ ರಾಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಪ್ರಮುಖರಾದ ಮೋಹನ್ ಸಾಲ್ಯಾನ್, ರಾಜೇಂದ್ರ ಸೇವಂತಿಗುಡ್ಡೆ, ದಾಮೋದರ ನಡಾರ್, ದೀಕ್ಷಿತ್ ನಿಸರ್ಗ ಕುಂಪಲ, ಶಿವಾಜಿ ಕುತ್ತಾರು, ಕೃಷ್ಣ ಪೊನ್ನೆತೋಡು, ರಮೇಶ್ ಸಾಮಾನಿ, ಗಂಗಾಧರ ಅಂಬ್ಲಮೊಗರು, ಬೃಜೇಶ್ ನಾಯರ್, ಕೇಂದ್ರದ ಮಕ್ಕಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.