ಉಳ್ಳಾಲ,ನ.11: ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಜೀರ್ಣೋದ್ಧಾರದ ಪ್ರಮುಖ ಹಂತವಾದ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು.
ಉಳಿಯ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಧರ್ಮದರ್ಶಿಯಾದ ದೇವು ಮೂಲ್ಯಣ್ಣ ಇವರ ಮಾರ್ಗದರ್ಶನದಲ್ಲಿ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಜೀರ್ಣೋದ್ಧಾರದ ತಂತ್ರಿವರ್ಯಾರಾದ ಪ್ರಸಾದ್ ನಲ್ಲುರಾಯ ಇವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದಿದೆ.
ಈ ಸಂದರ್ಭದಲ್ಲಿ ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲದ ಅರ್ಚಕರಾದ ಮಂಜಪ್ಪ ಕಾರ್ನವರ್ ( ಬಾಲು ಉಳ್ಳಾಲ ಬೈಲ್), ಅಪ್ಪು ಆತಾರ್ (ಕಮಾಲಾಕ್ಷ ಉಳ್ಳಾಲ್), ಶ್ರೀ ಉಳಿಯ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದ ಗುರಿಕರಾದ ಅಂತ ಗುರಿಕಾರ (ರಾಜೇಶ್ ನಾಯ್ಕ್) ಉಪಸ್ಥಿತರಿದ್ದರು.
ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್ (ರಿ) ಇದರ ಮ್ಯಾನೇಜಿಂಗ್ ಟ್ರಸ್ಟಿ ರಾಜೇಶ್ ಅಡ್ಕ, ಹಾಗೂ ಸದಸ್ಯರಾದ ಶರತ್ ಪೂಜಾರಿ, ಪಿ. ಬಾಲಕೃಷ್ಣ, ಧರ್ಮೇಂದ್ರ ಉಳ್ಳಾಲ, ರಿತಿನ್ ಮೊರ್ಲ ಮತ್ತು ಶಾಲೆಯ ಗುರುಗಳಾದ ವಿಜಯ್ ಅಮಿನ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ನವನೀತ್ ಉಳ್ಳಾಲ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ನವನೀತ ಶೆಟ್ಟಿ ಕದ್ರಿ ಉಪಸ್ಥಿತರಿದ್ದು ಜೀರ್ಣೋದ್ಧಾರ ಕಾರ್ಯದಲ್ಲಿ ಸಮಿತಿಯ ಕರೆಗೆ ಓ ಕೊಟ್ಟು ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಸಂದರ್ಭದಲ್ಲಿ ಸದಸ್ಯರಿಗೆ ಹಾಗೂ ಸಾರ್ವಜನಿಕರಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳುವುದು ಪುಣ್ಯದ ಕೆಲಸ ಹಾಗೂ ಕೆಲವು ಪ್ರೇರಣೆಯ ಮಾತುಗಳನ್ನಾಡಿ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ಅಂಜನಿ ಮಹಿಳಾ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರು ದೇವಾತಾಕಾರ್ಯಕ್ಕೆ ಸಂತಸ ವ್ಯಕ್ತಡಿಸಿದರು.