Site icon Ullalavani

ಸದ್ದಿಲ್ಲದೇ ಹಸೆಮಣೆಯೇರಿದ ಅಮೃತವರ್ಷಿಣಿ ಖ್ಯಾತಿಯ ರಜನಿ

‘ಅಮೃತವರ್ಷಿಣಿ’ ಧಾರಾವಾಹಿಯ ರಜಿನಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಅವರು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರುಣ್ ಅವರ ಜೊತೆ ವಿವಾಹ ಆಗಿದ್ದಾರೆ. ಆಪ್ತರು ಬಂದು ಅವರಿಗೆ ಹಾರೈಸಿದ್ದಾರೆ.

ಅರುಣ್ ಹಾಗೂ ರಜಿನಿ ಮಧ್ಯೆ ತುಂಬಾನೇ ಹಳೆಯ ಪರಿಚಯ ಇದೆ. ಇವರು ಕಳೆದ ಎರಡು ವರ್ಷಗಳಿಂದ ಒಟ್ಟಾಗಿ ರೀಲ್ಸ್ ಮಾಡುತ್ತಿದ್ದರು. ಅವರ ರೀಲ್ಸ್​ಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.

ಈ ಮೊದಲು ‘ನಿಮ್ಮಿಬ್ಬರ ಮಧ್ಯೆ ಪ್ರೀತಿ ಇದೆಯೇ’ ಎಂದು ಕೇಳಿದಾಗ ರಜಿನಿ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಗೆಳೆಯರನ್ನೇ ಮದುವೆ ಆದರೂ ಬೆಸ್ಟ್. ಅವರಿಗೆ ನಮ್ಮ ಕಷ್ಟ ಸುಖ ಗೊತ್ತಿರುತ್ತದೆ’ ಎಂದು ರಜಿನಿ ಹೇಳಿದ್ದರು.ಇಂದು ನಡೆದ ಮದುವೆಯಲ್ಲಿ ಆಪ್ತರು, ಗೆಳೆಯರು, ಕುಟುಂಬದವರು ಹಾಜರಿ ಹಾಕಿದ್ದರು. ಅರುಣ್ ಹಾಗೂ ರಜಿನಿ ವಿವಾಹದ ಫೋಟೋಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ.ರಜಿನಿ ಹಾಗೂ ಅರುಣ್ ಅವರದ್ದು ಪ್ರೇಮ ವಿವಾಹ. ಮನೆಯವರ ಒಪ್ಪಿಗೆ ಪಡೆದ ಬಳಿಕವೇ ಮದುವೆ ಆಗಿದ್ದಾರೆ. ರಜಿನಿ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅರುಣ್ ಅವರು, ಜಿಮ್ ಟ್ರೇನರ್ ಆಗಿದ್ದಾರೆ. ಇವರು ಇನ್ನಷ್ಟೇ ತಮ್ಮ ಲವ್​​ಸ್ಟೋರಿ ರಿವೀಲ್ ಮಾಡಬೇಕಿದೆ.

Exit mobile version