Site icon Ullalavani

ತಂದೆ-ಮಗಳು ಆತ್ಮಹತ್ಯೆಗೆ ಮುಂದಾಗಿದ್ದ ಪ್ರಕರಣ: ವಿಚ್ಛೇದನಕ್ಕೆ ಪಟ್ಟುಹಿಡಿದ ಪತ್ನಿ..!!

ಮಂಗಳೂರು,ನ.6: ಕಡಲಿಗೆ ಹಾರಲು ಮುಂದಾಗಿ ಬಳಿಕ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಹಾಗೂ ಆತನ ಜೊತೆಗಿದ್ದ ಪುಟ್ಟ ಹೆಣ್ಣು ಮಗುವನ್ನು ಪೊಲೀಸರು ರಕ್ಷಿಸಿದ ಬಳಿಕ ಘಟನೆಗೆ ಸಂಬAಧಿಸಿದoತೆ ಮಹತ್ವದ ಬೆಳಕಿಗೆ ಕಂಡುಬoದಿದೆ.

ಪುಟ್ಟ ಹೆಣ್ಣು ಮಗುವನ್ನು ತಂದೆಯ ತಂದೆ (ಅಜ್ಜ)ನೊಂದಿಗೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.

ಗಂಡ-ಹೆoಡತಿ ನಡುವಿನ ವೈಮನಸ್ಸು-ಕಲಹದ ಪರಿಣಾಮ ಪತಿಯು ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದನು. ಆದರೆ ಪೊಲೀಸರ ಕಾರ್ಯವೈಖರಿ, ಸಮಯಪ್ರಜ್ಞೆಯಿಂದ ಇಬ್ಬರನ್ನು ರಕ್ಷಿಸಿದ್ದಾರೆ.

ಪೊಲೀಸರು ಗಂಡ-ಹೆoಡತಿಯ ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ರೂ ಹೆಂಡತಿ ರಾಜಿಯಾಗಲು ಒಪ್ಪಲಿಲ್ಲ. ವಿಚ್ಛೇದನಕ್ಕಾಗಿ ಪಟ್ಟು ಹಿಡಿದಿದ್ದಳು. ಈ ಹಿನ್ನಲೆ ಅವರುಗಳಿಗೆ ನ್ಯಾಯಾಲಯದ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.

ಇನ್ನು ಮಗುವನ್ನು ತಾಯಿಯ ಒಪ್ಪಿಗೆಯ ಮೇರೆಗೆ ತಂದೆಯ ತಂದೆ(ಅಜ್ಜ)ನೊoದಿಗೆ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ. ಆ ಮೂಲಕ ಸದ್ಯಕ್ಕೆ ಈ ಪ್ರಕರಣ ಸುಖಾಂತ್ಯ ಕಂಡಿದೆ.

Exit mobile version