Site icon Ullalavani

ಸೂರಜ್ ಸ್ಕೂಲ್ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ; DYFI ಮುಡಿಪು ಘಟಕದಿಂದ ಮನವಿ

ಮುಡಿಪು,ನ.5: ನವೆಂಬರ್ 3ರ ಸೋಮವಾರದಂದು ಮುಡಿಪು ಸೂರಜ್ ಸ್ಕೂಲ್‌ನಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಶಾಲೆಯಿಂದ ಮನೆಗೆ ತೆರಳುವ ವೇಳೆ ಸಂಶಯಾಸ್ಪದ ರೀತಿಯಲ್ಲಿ ಕಾರು ನಿಂತು ಮಕ್ಕಳನ್ನು ಕರೆಯುವ ಘಟನೆ ನಡೆದಿದೆ ಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಡಿವೈಎಫ್‌ಐ ದೂರನ್ನು ನೀಡಿದೆ.

ಅದೃಷ್ಟವಶಾತ್ ಆ ಸಮಯದಲ್ಲಿ ಬಸ್ ಬಂದ ಕಾರಣ ಮಕ್ಕಳು ಸುರಕ್ಷಿತವಾಗಿ ಬಸ್ ಹತ್ತಿದ್ದಾರೆ. ಆದರೆ ಮಕ್ಕಳು ಇಳಿದ ಸ್ಥಳದಲ್ಲಿಯೂ ಅದೇ ಕಾರು ಕಾಣಿಸಿಕೊಂಡಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ, ಡಿವೈಎಫ್‌ಐ ಮುಡಿಪು ಘಟಕದ ವತಿಯಿಂದ ಸೂರಜ್ ಕಾಲೇಜಿನ ಪ್ರಿನ್ಸಿಪಾಲ್ ರವರನ್ನು ಭೇಟಿಯಾಗಿ ಈ ಕುರಿತು ಕಾಳಜಿ ವಹಿಸುವಂತೆ, ಭದ್ರತೆ ಹಾಗು ಮುಂಜಾಗರೂಕತೆ ವಹಿಸುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಫ್‌ಐ ಮುಡಿಪು ಘಟಕದ ಅಧ್ಯಕ್ಷ ಉಸ್ಮಾನ್ ಅಲ್ತಾಫ್, ರಾಣಿ ಅಬ್ಬಕ್ಕ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ನಾಯಕ್, ಮತ್ತು ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ ಉಪಸ್ಥಿತರಿದ್ದರು.

ಕಾಲೇಜಿನ ಪ್ರಿನ್ಸಿಪಾಲ್ ರಕ್ಷಿತ್ ಕುಲಾಲ್ ರವರು ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Exit mobile version