ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಪದವಿ ಪಡೆದ ವಿದ್ಯಾರ್ಥಿಗಳು ದೇಶದ ಮೇಲ್ವಿಚಾರಕರು ಮತ್ತು ಆಧುನಿಕತೆಯಿಂದ ಕೂಡಿದ ಒಂದು ಪ್ರಾಚೀನ ಸಂಪ್ರದಾಯದ ಪೋಷಕರು ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಮ್.ಸಿ ಮಿಶ್ರಾ ಹೇಳಿದ್ದಾರೆ.
ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ವಿವಿಯ ಐದನೆಯ ಘಟಿಕೋತ್ಸವದಲ್ಲಿ ಪದವಿಪ್ರದಾನ ಮಾಡಿ ಮಾತನಾಡಿದರು.
ಗುರಿ ಎಂದೂ ದೊಡ್ಡದಾಗಿರಲಿ, ಅದನ್ನು ಸಾಧಿಸುವುದು ಕಷ್ಟಕರ ಅಥವಾ ಅಸಾಧ್ಯವೇ ಆಗಿರಬಹುದು. ಆದರೆ ತಲೆಯಲ್ಲಿರುವಂಥ ಯೋಚನೆಯನ್ನು ಹೃದಯದಿಂದ ನಂಬಿದಾಗ ನಿಮ್ಮ ಪ್ರಯತ್ನಗಳ ಮೂಲಕ ಅದನ್ನು ಸಾಧಿಸಲು ಸಾಧ್ಯ ಎಂದವರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಜಗತ್ತಿನ ಆರನೇ ಒಂದು ಭಾಗದಷ್ಟು ಜನರು ಭಾರತದಲ್ಲಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಂಡರೆ ಬಹುತೇಕ ವೈದ್ಯರು, ಮತ್ತು ವೈದ್ಯಕೀಯ ಸೌಲಭ್ಯಗಳು ನಗರ ಪ್ರದೇಶಗಳಲ್ಲೇ ಇದೆ. ಭಾರತದಲ್ಲಿ 6,38,500 ಹಳ್ಳಿಗಳಿವೆ ಎಂಬುದನ್ನು ನಾವು ಮರೆತಿದ್ದೇವೆ. ಬಹುತೇಕ ಹಳ್ಳಿಗಳಲ್ಲಿ ಕನಿಷ್ಟ ಮೂಲಭೂತ ಆರೋಗ್ಯ ಕೇಂದ್ರಗಳು ಕೂಡಾ ಇಲ್ಲ. ಭಾರತದ ಹೃದಯವಾಗಿರುವ ಹಳ್ಳಿಗಳಿಗೆ ವೈದ್ಯಕೀಯ ಸೌಲಭ್ಯಗಳು ತಲುಪುವಂತೆ ಮಾಡುವುದು ನಮ್ಮ ಧ್ಯೇಯವಾಗಬೇಕು ಎಂದು ಮಿಶ್ರಾ ನುಡಿದರು.
ಘಟಿಕೋತ್ಸವದಲ್ಲಿ ಗೋಲ್ಡ್ ಮೆಡಲ್ ವಿಜೇತರಾದ ಪೆಡೊಡೋಂಟಿಕ್ಸ್ ಆ್ಯಂಡ್ ಪ್ರಿವೆಂಟಿವ್ ಡೆಂಟಿಸ್ಟಿ ್ರಯ ಡಾ. ಜೋಶಿ ಆಮ್ ಭರತ್ ಅವರಿಗೆ ಡಾ. ಎ.ಕೆ.ಮುನ್ಶಿ ಗೋಲ್ಡ್ ಮೆಡಲ್, ಬ್ಯಾಚುರಲ್ ಆಫ್ ಡೆಂಟಿಸ್ಟಿ ್ರಯ ಡಾ. ತೆ ಕ್ಸಿಂಗ್ ಹುಯಿ ಅವರಿಗೆ ಡಾ. ಯು.ಎಸ್. ಮೋಹನ್‍ದಾಸ್ ನಾಯಕ್ ಹಾಗೂ ನಿಟ್ಟೆ ವಿವಿ ಗೋಲ್ಡ್ ಮೆಡಲ್, ಬ್ಯಾಚುರಲ್ ಆಫ್ ಮೆಡಿಸಿನ್ ಆ್ಯಂಡ್ ಬ್ಯಾಚುರಲ್ ಆಫ್ ಸರ್ಜರಿಯ ಡಾ. ಕೆ. ಕಾವ್ಯಮಾಲಾ ಅವರಿಗೆ ದಿವಂಗತ ಮುಲ್ಕಿ ರಾಮಮೋಹನ್ ಅಡ್ಯಂತಾಯ ಗೋಲ್ಡ್ ಮೆಡಲ್ ಹಾಗೂ ನಿಟ್ಟೆ ವಿವಿ ಗೋಲ್ಡ್ ಮೆಡಲ್, ಬ್ಯಾಚುರಲ್ ಆಫ್ ಫಾರ್ಮಚ್ಯುಯೆಲ್ ಸೈನ್ಸಸ್‍ನ ದೀಕ್ಷಾ ಯು. ಸುವರ್ಣ ಅವರಿಗೆ ನಿಟ್ಟೆ ವಿವಿ ಗೋಲ್ಡ್ ಮೆಡಲ್, ಬ್ಯಾಚುರಲ್ ಆಫ್ ಸೈನ್ಸ್ ಇನ್ ನರ್ಸಿಂಗ್‍ನ ಬಿದ್ಯಾ ಪೌಡೆಲ್ ಅವರಿಗೆ ನಿಟ್ಟೆ ವಿವಿ ಗೋಲ್ಡ್ ಮೆಡಲ್, ಪೋಸ್ಟ್ ಬೇಸಿಕ್ ಬ್ಯಾಚುರಲ್ ಆಫ್ ಸೈನ್ಸ್ ಇನ್ ನರ್ಸಿಂಗ್‍ನ ತೆಂಜಿನ್ ಚೋಯೆಡನ್ ಅವರಿಗೆ ನಿಟ್ಟೆ ವಿವಿ ಗೋಲ್ಡ್ ಮೆಡಲ್ ಹಾಗೂ ಮಾಸ್ಟರ್ ಆಫ್ ಸೈನ್ಸ್(ಬಯೋ ಮೆಡಿಕಲ್ ಸೈನ್ಸ್‍ನ ಶ್ರೀವಿದ್ಯಾ ಅವರಿಗೆ ಡಾ. ಇಂದ್ರಾಣಿ ಕರುಣಾಸಾಗರ್ ಗೋಲ್ಡ್ ಮೆಡಲ್ ವಿತರಿಸಲಾಯಿತು.
ಡಾಕ್ಟರ್ ಆಫ್ ಫಿಲಾಸಫಿಯ 15, ವೈದ್ಯಕೀಯ 151, ದಂತ 151, ಫಾರ್ಮಸಿಯ 110, ನರ್ಸಿಂಗ್‍ನ 76, ಫಿಸಿಯೋಥೆರಪಿಯ 16, ಫಿಸಿಯೋಥೆರಪಿಯ 16 ಹಾಗೂ ಅಲೈಡ್ ಸೈನ್ಸ್‍ನ 22, ಬಿಎಸ್ಸಿಯ 5, ಎಂ.ಎ ಪತ್ರಿಕೋದ್ಯಮ 5ಪದವೀಧರರು ಸೇರಿದಂತೆ ಘಟಿಕೋತ್ಸವದಲ್ಲಿ 546ವಿದ್ಯಾರ್ಥಿಗಳಿಗೆ ಡಾ. ಎಂ.ಸಿ. ಮಿಶ್ರಾ ಪದವಿ ಪ್ರದಾನ ಮಾಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ್ ಹೆಗ್ಡೆ ಘಟಿಕೋತ್ಸವ ನಡೆಸಿಕೊಟ್ಟರು.
ಸಹ ಕುಲಾಧಿಪತಿ ಪ್ರೊ. ಡಾ. ಶಾಂತಾರಾಮ ಶೆಟ್ಟಿ, ಕುಲಸಚಿವ ಡಾ. ಎಂ.ಎಸ್.ಮೂಡಿತ್ತಾಯ, ಕ್ಷೇಮ ಡೀನ್ ಪ್ರೊ.ಡಾ. ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ. ಜಯಪ್ರಕಾಶ್ ಶೆಟ್ಟಿ, ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ಡೀನ್ ಪ್ರೊ. ಡಾ. ಯು.ಎಸ್. ಕೃಷ್ಣ ನಾಯಕ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ.ಎಸ್. ರಮಾನಂದ ಶೆಟ್ಟಿ ಸ್ವಾಗತಿಸಿದರು.