Site icon Ullalavani

ಸಮಾಜ ಸೇವಕ ಸಂತೋಷ್ ರೈ ಬೋಳಿಯಾರ್ ಮುತುವರ್ಜಿಯಲ್ಲಿ `ನಮೋ ಕುಟೀರ’ದ 6 ನೇ ಮನೆಯ ಶಿಲಾನ್ಯಾಸ

ಉಳ್ಳಾಲ, ನ.5: ಬಡಬಗ್ಗರು, ನಿರ್ಗತಿಕರು, ಮನೆಯಿಲ್ಲದೇ ಕಂಗಾಲಾಗಿರುವವರನ್ನು ಗುರುತಿಸಿ ಅವರಿಗೆ `ನಮೋ ಕುಟೀರ’ಎಂಬ ಹೆಸರಿನ ಮೂಲಕ ಬಿಜೆಪಿ ಮುಖಂಡರಾಗಿರುವ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಮನೆಯನ್ನು ಕಟ್ಟಿಕೊಡುವ ಮೂಲಕ ಒಂದು ಸೂರನ್ನು ನಿರ್ಮಿಸಿಕೊಡುತ್ತಿದ್ದಾರೆ. ಈ ಸಾರ್ಥಕ ಕಾಯಕದಿಂದ ಸಮಾಜಕ್ಕೆ ಮಾದರಿಯಾಗಿದ್ದು, ಇವರ ನಿಸ್ವಾರ್ಥ ಸೇವೆಯಿಂದ ಈಗಾಗಲೇ 5 ಮನೆಗಳನ್ನು ಕಟ್ಟಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ.

ಸಂತೋಷ್ ಕುಮಾರ್ ರೈ ಅವರು ಈ ಹಿಂದೆ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಸುದ್ದಿಯಾಗಿದ್ರು. ಇದೀಗ ಒಲಿತು ಮಾಡು ಮನುಷ್ಯ ಎನ್ನುತ್ತಾ ಅಸಹಾಯಕರ ಕಂಬನಿ ಒರೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ನಮೋ ಕುಟೀರ ಯೋಜನೆಯ 6 ನೇ ಮನೆಯ ಶಿಲಾನ್ಯಾಸ ಇಂದು ನೆರವೇರಿದೆ. ಹೌದು, ಮಕ್ಕಳಿಲ್ಲದೇ ಜೀವನ ನಡೆಸುತ್ತಿದ್ದ ಹಿರಿಯಜೀವಗಳಾದ ರುಕ್ಮಯ ಮೂಲ್ಯ ಮತ್ತು ವಿಜಯ ದಂಪತಿಗೆ ಇರುವ ಒಂದು ಸೂರನ್ನು ಕಳೆದುಕೊಳ್ಳುವ ಸನ್ನಿವೇಶ ಎದುರಾದಾಗ ಗ್ರಾಮಸ್ಥರು, ನೆರೆ-ಹೊರೆಯವರು ಬಡವರ ಕಣ್ಮಣಿ, ಸಮಾಜ ಸೇವಕರಾದ ಸಂತೋಷ್ ರೈ ಬೋಳಿಯಾರ್ ಅವರ ಬಳಿ ಈ ಸಂಗತಿ ಪ್ರಸ್ತಾಪಿಸಿದ್ರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಬೋಳಿಯಾರ್ ಅವರು ಕುರ್ನಾಡು ಪ್ರದೇಶದಲ್ಲಿ ದಮಯಂತಿ ಕುಲಾಲ್ ಎಂಬವರು ಕೊಟ್ಟ ಜಾಗದಲ್ಲಿ ಮನೆಕಟ್ಟಿಸಲು ಮುಂದಾಗಿದ್ದು, ಇಂದು ಫಲಾನುಭವಿಗಳ ಉಪಸ್ಥಿತಿಯಲ್ಲಿ ಶಿಲಾನ್ಯಾಸವೂ ನೆರವೇರಿದೆ. ಈ ಬಗ್ಗೆ ಸ್ವತಃ ಬಿಜೆಪಿ ಮುಖಂಡರಾದ ಸಂತೋಷ್ ರೈ ಬೋಳಿಯಾರ್ ಅವರು ಮಾತನಾಡಿದ್ದಾರೆ.

ಮನೆಯನ್ನು ಕಟ್ಟಿಸಿಕೊಡುತ್ತಿರುವ ಸಂತೋಷ್ ರೈ ಅವರು, ಉಳ್ಳಾಲ ತಾಲೂಕಿನ ಪಜೀರು ಗ್ರಾಮದಲ್ಲಿರುವ ದಿ ಮೈಸೂರು ಎಲೆಕ್ಟಿçಕಲ್ ಇಂಡಸ್ಟ್ರೀಸ್ ಲಿ. ಇದರ ನಿಕಟಪೂರ್ವ ಅಧ್ಯಕ್ಷರೂ ಹಾಗೂ ಬಿಜೆಪಿ ಮುಖಂಡರೂ ಆಗಿದ್ದಾರೆ. ಸಮಾಜಕ್ಕೋಸ್ಕರ ತಮ್ಮನ್ನ ಅರ್ಪಣೆ ಮಾಡಿದವರನ್ನ ಸಮಾಜವೇ ಗುರುತಿಸುತ್ತದೆ ಎಂಬ ಮಾತು ಬೋಳಿಯಾರ್ ಅವರ ಜೀವನದಲ್ಲಿ ನಿಜವಾಗಿಬಿಟ್ಟಿದೆ. ಪ್ರಧಾನಿ ಮೋದಿಯವರ ಚಿಂತನೆಗಳನ್ನು ಅನುಸರಿಸುವ ಇವರು ಬಡಬಗ್ಗರಿಗೆ ತನ್ನಿಂದಾಗುವ ಸಹಾಯವನ್ನು ಮಾಡಿಕೊಂಡು, ಇಂದು ನಮೋ ಹೆಸರಿನಲ್ಲೇ ಸೂರನ್ನು ಕಳೆದುಕೊಂಡವರಿಗೆ, ಆಶಕ್ತರಿಗೆ ಸೂರನ್ನ ಮುತುವರ್ಜಿಯಿಂದ ಕಲ್ಪಿಸಿಕೊಡುತ್ತಿದ್ದಾರೆ.

ಇವರ ನಿಸ್ವಾರ್ಥ ಸೇವೆಯ ಬಗ್ಗೆ ಜನಶಿಕ್ಷಣ ಟ್ರಸ್ಟ್ ಮುಡಿಪು ಇದರ ನಿದೇರ್ಶಕರಾದ ಶೀನ ಶೆಟ್ಟಿ ಅವರು ಮಾತನಾಡಿ, ಮನುಷ್ಯ ಮನೆಯ ಜೊತೆ ಮನಸ್ಸುಗಳನ್ನು ಕಟ್ಟಿಕೊಡಬೇಕು. ಈ ಕೆಲಸವನ್ನು ಸಂತೋಷ್ ರೈ ಬೋಳಿಯಾರ್ ಅವರು ಮಾಡುತ್ತಾ ಬಂದಿದ್ದಾರೆ. ಇದೀಗ ಹಿರಿಜೀವಗಳಿಗೆ ಸೂರನ್ನು ಒದಗಿಸುವ ಮೂಲಕ ಮಕ್ಕಳಿಲ್ಲದ ಅವರುಗಳ ಪಾಲಿಗೆ ಮಗನಾಗಿ ಭರವಸೆಯ ಬೆಳಕಾಗಿದ್ದಾರೆ. ಇದು ದೈವಿಕ ಕಾರ್ಯವೆಂದೇ ನಾನು ಭಾವಿಸುತ್ತೇನೆ. ಎಲ್ಲಾ ಜಾತಿ,ಧರ್ಮ, ಪಕ್ಷಗಳನ್ನು ಮರೆತು ಎಲ್ಲರೂ ಈ ಕಾರ್ಯದಲ್ಲಿ ಭಾಗವಹಿಸಿದ್ದು, ಅತ್ಯಂತ ಖುಷಿಯ ಸಂಗತಿ ಎಂದ್ರು.

ಮನೆ ಕಟ್ಟಲು ಜಾಗವನ್ನು ಬಿಟ್ಟುಕೊಟ್ಟು ಈ ಪುಣ್ಯಕಾರ್ಯದಲ್ಲಿ ಪಾಲು ಪಡೆದ ದಮಯಂತಿ ಕುಲಾಲ್ ಅವರು ಈ ಸಂದರ್ಭ ಮಾತನಾಡಿ, ಸಂತೋಷ್ ರೈ ಬೋಳಿಯಾರ್ ಜನಮೆಚ್ಚಿದ ನಾಯಕ. ಜನರ ಕಷ್ಟ,ನಷ್ಟಕ್ಕೆ ಸ್ಪಂದಿಸುವ ಉದಾರ ಮನಸ್ಸುವುಳ್ಳ ವ್ಯಕ್ತಿ. ಇವರ ಈ ಕಾಯಕ ಸದಾ ಮುಂದುವರೆದು ಇನ್ನಷ್ಟು ಅಸಹಾಕರ ಕಂಬನಿ ಒರೆಸುವಂತಾಗಲಿ ಎಂದು ಹಾರೈಸಿದ್ರು.

ಇನ್ನು ಈ ಕಾರ್ಯಕ್ರಮದಲ್ಲಿ ಶಿವಶಂಕರ್ ಭಟ್, ನಿತಿನ್ ಗಟ್ಟಿ, ರಾಜೇಶ್ ಮಡಿವಾಳ, ಲೋಕೇಶ್ ಪೂಜಾರಿ, ರಮೇಶ್ ಬೆದ್ರೊಳಿಕೆ, ಚಂದ್ರಶೇಖರ್, ರವಿ ಕಜೆ, ವಿಠಲ್ ಅಮೀನ್, ಹರೀಶ್, ಮನೋಹರ್, ರವಿಶಂಕರ್ ಸೋಮೇಶ್ವರ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದಾರೆ.

ಹಣವಿದ್ದಷ್ಟು ಬಂಗಲೆ ಕಟ್ಟಿಕೊಂಡು ಹೋಗುವ ಜನರಿರುವ ನಮ್ಮ ಸಮಾಜದಲ್ಲಿ, ನಿಸ್ವಾರ್ಥಿ ಸಂತೋಷ್ ರೈ ಬೋಳಿಯಾರ್ ಅವರು ವಿಶೇಷ ವ್ಯಕ್ತಿಯಾಗಿ ಎಲ್ಲರ ಮನಸ್ಸಲ್ಲು ಅಚ್ಚಳಿಯದಂತೆ ಉಳಿದುಬಿಟ್ಟಿದ್ದಾರೆ. ಇವರ ಈ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ ಇನ್ನಷ್ಟು ಜೀವಗಳಿಗೆ ಆಸರೆಯಾಗುವ ಯೋಗ ಭಾಗ್ಯ ಇವರಿಗೆ ಸಿಗಲಿ ಅನ್ನೊದು ನಮ್ಮೆಲ್ಲರ ಆಶಯ.

Exit mobile version