ಉಳ್ಖಾಲ,ನ.05: ಇದೇ ನ.8,9 ಮತ್ತು 10 ರಂದು ಗಟ್ಟಿ ಸಮಾಜ ಭವನದ ಆವರಣದಲ್ಲಿ ಉಳ್ಳಾಲ ಕೃಷಿ ಉತ್ಸವ ದೇಸಿ ಆಹಾರ ಮೇಳ ಆದ್ದೂರಿಯಾಗಿ ಮೇಳೈಸಲಿದೆ.
ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕರ್ನಾಟಕ ಗೇರು ಅಭಿವೃದ್ದಿ ನಿಗಮ ಮಂಗಳೂರು ಹಾಗೂ ಕೃಷಿ ಇಲಾಖೆ ಮಂಗಳೂರು ಮತ್ತು ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ (ರಿ.) ಹಾಗೂ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಸಹಯೋಗದೊಂದಿಗೆ ವಿನೂತನ ಕಾರ್ಯಕ್ರಮ ಆಯೋಜನೆಗೊಂಡಿದೆ. ಕೆಲವರಿಗೆ ಚೈನಿಸ್, ಜಂಕ್ ಫುಡ್ ತಿಂದು ತಿಂದು ನಾಲಗೆಯ ರುಚಿ ಕೆಟ್ಟಿರತ್ತೆ. ಹಾಗಾಗಿ ಖಂಡಿತವಾಗಲೂ ದೇಸಿ ಆಹಾರ ತಿನ್ನುಬೇಕು ಅನ್ಸತ್ತಾ ಸೊ ನೀವು ಖಂಡಿತವಾಗಲೂ ಈ ದೇಸಿ ಆಹಾರ ಮೇಳಕ್ಕೆ ಬಂದು ಶುಚಿ ರುಚಿಯಾದ ಆಹಾರವನ್ನು ಸವಿಯಬಹುದು.
ಇನ್ನು ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯ ಜೊತೆಗೆ ನಿಮಗೆ ಉಪಯೋಕ್ತವಾಗುವ ನಿಟ್ಟಿನಲ್ಲಿ ಕೃಷಿಗೆ ಸಂಬoಧಿಸಿದ ಮಾಹಿತಿಗಳು ಕೂಡ ಇಲ್ಲಿ ಲಭ್ಯವಿದೆ. ಇಲಾಖಾ ಮಾಹಿತಿ ಮಳಿಗೆಗಳು, ತರಕಾರಿ ಬೀಜ, ಸಸ್ಯಗಳ ಮಾರಾಟ, ಪ್ರಾತ್ಯಕ್ಷಿಕೆ, ವೈವಿಧ್ಯಮಯ ಪಕ್ಷಿಗಳ ಪ್ರದರ್ಶನ, ಅಲಂಕಾರಿಕ ಮತ್ಸö್ಯ ಪ್ರದರ್ಶನ, ಗುಡಿಕೈಗಾರಿಕೆ ಪ್ರಾತ್ಯಕ್ಷಿತೆ, ನಾಟಿಕೋಳಿ ಸಾಕಾಣಿಕೆ ಮಾಹಿತಿ, ಪ್ರದರ್ಶನ, ಟೆರೆಸ್ ಗಾರ್ಡನಿಂಗ್ ಪ್ರಾತ್ಯಕ್ಷಿಕೆ, ಜೇನು ಕೃಷಿ ಮಾದರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಈ ಕೃಷಿ ಮೇಳದಲ್ಲಿ ನಿಮಗೆ ಲಭ್ಯವಾಗತ್ತೆ. ಒಂದೇ ಸೂರಿನಡಿ ವಿವಿಧ ಕಲರ್‌ಫುಲ್ ಕಲರವಗಳನ್ನು ನೋಡಲು ನಿಮಗೆ ಇದು ಸುವರ್ಣಾವಕಾಶ. ಹಾಗಾಗಿ ನಾವೆೆಲ್ಲರೂ ಉಳ್ಳಾಲ ಕೃಷಿ ಉತ್ಸವ ದೇಸಿ ಆಹಾರ ಮೇಳದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
