Site icon Ullalavani

ಉಳ್ಳಾಲ : ಮೊಗವೀರಪಟ್ನ–ಕೋಟೆಪುರ ರಸ್ತೆ ಅಭಿವೃದ್ಧಿಗೆ ಸ್ಪೀಕರ್ ಯು.ಟಿ. ಖಾದರ್ ಸ್ಪಂದನೆ

ಉಳ್ಳಾಲ: ಮೊಗವೀರಪಟ್ನ ಕೋಟೆಪುರ ಪ್ರದೇಶದ ರಸ್ತೆ ಸಮಸ್ಯೆಗೆ ಸ್ಪೀಕರ್ ಯು.ಟಿ. ಖಾದರ್ ತಕ್ಷಣ ಸ್ಪಂದಿಸಿ, ಅಬ್ಬಕ್ಕ ಸರ್ಕಲ್‌ದಿಂದ ಕೋಟೆಪುರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಕೋಟಿ ಮಂಜೂರು ಮಾಡಿದ್ದು, ಟೆಂಡರ್ ಹಂತದಲ್ಲಿರುವುದಾಗಿ ಸ್ಪೀಕರ್ ಯು. ಟಿ ಖಾದರ್ ತಿಳಿಸಿದ್ದಾರೆ.



ಉಲ್ಲಾಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಪೀಕರ್ ಅವರನ್ನು ಮೊಗವೀರಪಟ್ಟಣ ನಿವಾಸಿಗಳು ಭೇಟಿ ನೀಡಿ ರಸ್ತೆ ಅವ್ಯವಸ್ಥೆ ಕುರಿತು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಪಂದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದ ಪ್ಯಾಚ್‌ ವರ್ಕ್‌ ಕಾರ್ಯಾರಂಭವಾಗಲಿದೆ. ರಸ್ತೆ ಮರುಡಾಮರೀಕರಣ ಕಾರ್ಯಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದ ಕಾಮಗಾರಿ ಆರಂಭವಾಗಲಿದೆ. ಅಲ್ಲಿಯವರೆಗೆ ನಾಳೆಯಿಂದಲೇ ಪ್ಯಾಚ್ ವರ್ಕ್ ಆರಂಭಗೊಳ್ಳಲಿದೆ ಎಂದಿದ್ದಾರೆ.
ಸ್ಥಳೀಯ ನಿವಾಸಿಗಳ ಮನವಿಗೆ ಸ್ಪೀಕರ್ ಖಾದರ್ ಸ್ಪಂದಿಸಿದ್ದು, ಉಳ್ಳಾಲದ ರಂಜಿತಾ ಉಳ್ಳಾಲ, ನಿಶಾ, ಕಾವ್ಯಶ್ರೀ ಹಾಗೂ ವೀಣಾ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ ಉಳ್ಳಾಲ ಉಪಸ್ಥಿತರಿದ್ದರು

Exit mobile version