Site icon Ullalavani

ಸಂಸದರ ಅನುದಾನದಲ್ಲಿ ಸೋಮೇಶ್ವರ ಕ್ಷೇತ್ರದಲ್ಲಿ ಶೌಚಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂಸದ ಬ್ರಿಜೇಶ್ ಚೌಟ

ಉಳ್ಳಾಲ: ಸೋಮೇಶ್ವರದ ,ಸೋಮನಾಥ ಕ್ಷೇತ್ರದ ಬಳಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು ರಾಜ್ಯ ಸರಕಾರವು ಇದರ ಬಗ್ಗೆ ವಿಶೇಷ ಗಮನ ನೀಡಬೇಕಿದೆ.ಶಾಸಕ ಯು.ಟಿ.ಖಾದರ್ ಅವರು ವಿದಾನಸಭೆಯ ಸಭಾಧ್ಯಕ್ಷರಾಗಿರುವುದರಿಂದ ಅವರಿಗೆ ಈಗ ವಿಶೇಷ ಶಕ್ತಿಯಿದ್ದು ಸೋಮೇಶ್ವರವನ್ನ ಪ್ರವಾಸೋದ್ಯಮ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸಬೇಕಿದೆಯೆಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ಉಳ್ಳಾಲ ತಾಲೂಕಿನ ಸೋಮೇಶ್ವರದ ಶ್ರೀ ಸೋಮನಾಥ ಕ್ಷೇತ್ರದ ಭಕ್ತರ ಬಳಕೆಗಾಗಿ ಸಂಸದರ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಶೌಚಾಲಯಕ್ಕೆ ಭಾನುವಾರದಂದು ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸೋಮನಾಥ ಕ್ಷೇತ್ರವು ಧಾರ್ಮಿಕ ಶ್ರದ್ಧಾ ಕೇಂದ್ರ ಮಾತ್ರವಲ್ಲದೆ ಈ ಪ್ರದೇಶವನ್ನ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಕಲ್ಪನೆ ಇದೆ.ಸೋಮನಾಥ ಕ್ಷೇತ್ರದ ಆಡಳಿತ ಸಮಿತಿಯವರು ಅಭಿವೃದ್ಧಿಯ ಕುರಿತಂತೆ ಉತ್ತಮವಾದ ಮಾಸ್ಟರ್ ಪ್ಲ್ಯಾನ್ ಮಾಡಿ ಕೊಡಿ.ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಅನುದಾನಗಳನ್ನ ಹೊಂದಿಸಿಕೊAಡು ಅಭಿವೃದ್ಧಿ ಯೋಜನೆಯನ್ನ ಕಾರ್ಯಗತಗೊಳಿಸುವ ಅವಕಾಶ ಇದೆ ಎಂದರು.

ಸೋಮೇಶ್ವರ ಪುರಸಭಾ ಅಧ್ಯಕ್ಷರಾದ ಕಮಲ ನೂತನ ಶೌಚಾಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು,ಕಾರ್ಯದರ್ಶಿ ದಿನೇಶ್ ಅಮ್ಟೂರು,ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್,ಪ್ರ.ಕಾ.ದಯಾನಂದ ತೊಕ್ಕೊಟ್ಟು,ಉಪಾಧ್ಯಕ್ಷರಾದ ಸುರೇಶ್ ಆಳ್ವ ಸಾಂತ್ಯಗುತ್ತು,ಮುಖAಡರಾದ ಸಂತೋಷ್ ಕುಮಾರ್ ರೈ ಬೋಳಿಯಾರು,ಯುವಮೋರ್ಚದ ಜಿಲ್ಲಾ ಉಪಾಧ್ಯಕ್ಷ ನಿಶಾನ್ ಪೂಜಾರಿ,ಮಹಿಳಾ ಮೋರ್ಚ ಮಂಡಲ ಅಧ್ಯಕ್ಷರಾದ ಮಾಧವಿ ಉಳ್ಳಾಲ್,ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯಾ ಶೆಟ್ಟಿ,ಸೋಮೇಶ್ವರ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ,ಸದಸ್ಯರಾದ ಜಯ ಪೂಜಾರಿ,ಸೋನಾ ಸುಭಾಷಿಣಿ,ಸ್ವಪ್ನ ಶೆಟ್ಟಿ,ಮೋಹನ್ ಶೆಟ್ಟಿ ಕುಂಪಲ,ಮನೋಜ್ ಕಟ್ಟೆಮನೆ,ಹರೀಶ್ ಕುಂಪಲ,ಪ್ರಮುಖರಾದ ಚಂದ್ರಶೇಖರ ಉಚ್ಚಿಲ್,ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ,ನಿತ್ಯಾನಂದ ಭಂಡಾರಿ ಮಾರುಜಾಗೆ,ಜೀವನ್ ಕುಮಾರ್ ತೊಕ್ಕೊಟ್ಟು,ಸುರೇಂದ್ರ ಶೆಟ್ಟಿ,ಸೂರಜ್ ಸಾಗರ್ ಕುಂಪಲ,ಮುರಳಿ ಕೊಣಾಜೆ,ಯೋಗೀಶ್ ಸೋಮೇಶ್ವರ,ಕಿಶೋರ್ ಕುತ್ತಾರು,ಸೋಮನಾಥ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಬೇಬಿ.ಎಮ್,ವ್ಯವಸ್ಥಾಪಕರಾದ ರಮಾನಾಥ ಬಂಗೇರ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಸ್ಕರ ಗಟ್ಟಿ ,ಸುಹಾಸಿನಿ ಬಬ್ಬುಕಟ್ಟೆ,ಸದಾನಂದ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ ಸೋಮೇಶ್ವರ ಸ್ವಾಗತಿಸಿದರು.

Exit mobile version