Site icon Ullalavani

ಸ್ಕೂಟಿಗೆ ಕುದುರೆ ಕಟ್ಟಿ ಎಳೆದ ವ್ಯಕ್ತಿ; ವೀಡಿಯೋ ವೈರಲ್

ಬೆಂಗಳೂರು, ನವೆಂಬರ್ 3: ಬೆಂಗಳೂರಿನ ರಸ್ತೆಯೊಂದರಲ್ಲಿ ಸ್ಕೂಟರ್​ ಸವಾರನೊಬ್ಬ ತನ್ನ ಗಾಡಿಗೆ ಕುದುರೆಯೊಂದನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಈ ಅಮಾನವೀಯ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ.

ಸ್ಕೂಟರ್​ಗೆ ಸವಾರನ ಅನಾಗರಿಕತೆ

ಸವಾರನೊಬ್ಬ ತನ್ನ ಸ್ಕೂಟರ್​ಗೆ ಅಸಹಾಯಕ ಕುದುರೆಯನ್ನು ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ತನ್ನ ಸುತ್ತ ಮುತ್ತಲೂ ಓಡಾಡುತ್ತಿರುವ ವಾಹನಗಳನ್ನು ನೋಡಿ ಕುದುರೆ ಭಯಭೀತವಾದಂತೆ ಈ ವೀಡಿಯೋದಲ್ಲಿ ಕಂಡುಬಂದಿದೆ. ಸ್ಕೂಟರ್​ಗೆ ಓಡಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸದೆ ಕೈಯಲ್ಲಿ ಫೋನ್ ಹಿಡಿದು ಪುಂಡಾಟ ಮೆರೆದಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈತನ ಬೇಜವಾಬ್ದಾರಿತನ ಮತ್ತು ಅನಾಗರಿಕತೆಗೆ ಅಸಹನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.

ಈ ಕುರಿತು ಕರ್ನಾಟಕ ಪೋರ್ಟ್​ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರಾಣಿಗಳು ಮನರಂಜನಾ ಸಾಧನಗಳಲ್ಲ; ಅವು ನಮ್ಮಂತೆಯೇ ನೋವು, ಭಯ ಮತ್ತು ಆಯಾಸವನ್ನು ಅನುಭವಿಸುತ್ತವೆ. ಅಧಿಕಾರಿಗಳು ಈ  ಕ್ರೌರ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವನಂತಹ ಜನರು ಕಠಿಣ ಶಿಕ್ಷೆಯನ್ನು ಎದುರಿಸುವಂತೆ ನೋಡಿಕೊಳ್ಳಬೇಕು ಎಂದು ಬರೆಯಲಾಗಿದೆ.

Exit mobile version