Site icon Ullalavani

ಕನ್ನಡ ಭಾಷೆ ಅದು ನಮ್ಮ ಸಂಸ್ಕೃತಿ – ಮೋಹಿನಿ

ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆಗಳು ಬಹಳ ವೈಶಿಷ್ಟ್ಯತೆಗಳೊಂದಿಗೆ ಶ್ರೀಮಂತವಾಗಿದೆ. ಕನ್ನಡ ಭಾಷೆ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪ್ರತಿನಿಧಿಸಿದೆ ಎಂದು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೋಹಿನಿ ಅಭಿಪ್ರಾಯ ಪಟ್ಟರು.

ಇವರು ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ಜಂಟಿ ಆಶ್ರಯದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭವನ್ನು ಜಂಟಿ ಶಾಲೆಗಳ ಸಂಚಾಲಕರು ಕಡೆಂಜ ಸೋಮಶೇಖರ ಚೌಟ ಅವರು ಉದ್ಘಾಟಿಸಿದರು

ಸಮಾರಂಭದ ಆಚರಣೆಯ ಮಹತ್ವವನ್ನು ತಿಳಿಸಿಕೊಟ್ಟ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಮ್ ಹರೇಕಳ ಇವರು ಕನ್ನಡ ರಾಜ್ಯೋತ್ಸವವು ನಮ್ಮ ಜನರ ಅಸ್ಮಿತೆಯನ್ನು ಹಾಗೂ ಏಕತೆಯನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ, ಕನ್ನಡಿಗರಾದ ನಾವುಗಳು ಕನ್ನಡ ಭಾಷೆಯ ಬಗ್ಗೆ ಒಳ್ಳೆಯ ಭಾವನೆ, ಸಾಹಿತ್ಯದಲ್ಲಿ ಒಳ್ಳೆಯ ಅಭಿರುಚಿ, ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡು ಪರ ಭಾಷಿಗರಿಗೆ ನಮ್ಮ ರಾಜ್ಯದ ವೈಶಿಷ್ಟ್ಯತೆಗಳನ್ನು ತಿಳಿಸಿ ಕೊಡುವ ಕೆಲಸ ಆಗ್ಬೇಕು ಎಂದರು.

ಈ ಸಂದರ್ಭದಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಮಕ್ಕಳು ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಮತ್ತು ಖ್ಯಾತ ಸಾಹಿತಿಗಳ, ಸಾಧನೆಗಳನ್ನು ಒಳಗೊಂಡ ಬಿತ್ತಿಪತ್ರಿಕೆಗಳನ್ನು ಪ್ರದರ್ಶನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುಮುದದೇವಿ, ರವಿಶಂಕರ್, ಕೃಷ್ಣ ಶಾಸ್ತ್ರೀ, ಶಿವಣ್ಣ, ಸ್ಮಿತಾ, ಉಷಾ, ನಾಗೇಂದ್ರ, ಪ್ರಷ್ಮಾ, ರೇಖಾ, ಅನಿತಾ,ಅಕ್ಷತಾ, ಮುಂತಾದವರು ಉಪಸ್ಥಿತರಿದ್ದರು.


ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಧನ್ಯವಾದ ವಿತ್ತರು.

Exit mobile version