Site icon Ullalavani

ಅಂಬ್ಯುಲೆನ್ಸ್ ಗೆ ದಾರಿ ನೀಡದೆ ಹುಚ್ಚಾಟ ಮೆರದವನ ವಿರುದ್ಧ ಪ್ರಕರಣ ದಾಖಲು…?!

ಬಂಟ್ವಾಳ, ಅ. 30: ಬಿಸಿಲೆ ಘಾಟ್ ನಲ್ಲಿ ಅಪಘಾತದ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದ ಸಮಯ ಅಲ್ಲಿನ ವೈದ್ಯರು ತುರ್ತು ಚಿಕಿತ್ಸೆ ನೀಡಿ ಗಂಭೀರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ KA.22.C.1382 ನೇ ಅಂಬ್ಯುಲೆನ್ಸ್ ನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ 1.30 ಕ್ಕೆ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್ ಜಿ ಸರ್ಕಲ್ನಿಂದ ಅಂಬ್ಯುಲೆನ್ಸ್ ಮುಂದಿನಿಂದ KA.19.EK.0696 ನೇ ದ್ವಿಚಕ್ರ ವಾಹನ ಸವಾರ ಅಂಬ್ಯುಲೆನ್ಸ್ ನ ಸೈರನ್ ಶಬ್ದ ಕೇಳಿಯೂ ಗೆ ದಾರಿ ಬಿಟ್ಟು ಕೊಡದೆ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ವ್ಯಕ್ತಿಯಾದ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು ( 38) ಎಂಬಾತನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣಾ ಅ.ಕ್ರ 128/2025 ಕಲಂ:110, 125 ಬಿ.ಎನ್.ಎಸ್ ನಂತೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version