Site icon Ullalavani

ಭಾರತ ದೇಶದ ವಿರುದ್ಧ ಅವಹೇಳನ ಕಾರಿ ಪೋಸ್ಟ್: ದೇಶ ದ್ರೋಹಿಗಳ ಹೆಡೆಮುರಿ ಕಟ್ಟಿದ ಉಳ್ಳಾಲ ಪೊಲೀಸರು…?!

ಉಳ್ಳಾಲ, ಅ. 30: ವಾಟ್ಸಾಪ್ ನಲ್ಲಿ ಭಾರತ ದೇಶಕ್ಕೆ ವಿರುದ್ಧ ವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಟಿಸಿರೋಡ್ ನ ಮೊಹಮ್ಮದ್ ಹನೀಫ್ (48), ಉಚ್ಚಿಲ ನಿವಾಸಿ ಮನೋಜ್ (56), ಫರಂಗಿಪೇಟೆ ನಿವಾಸಿ ಉಮ್ಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಮು ಸಂಘರ್ಷಕ್ಕೆ ಪ್ರಚೋದನೆಯಾಗುವಂತಹ ಪೋಸ್ಟ್ ಅನ್ನು ವಾಟ್ಸಾಪ್ ನಲ್ಲಿ ಹರಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೂರು ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Exit mobile version