Site icon Ullalavani

ಕಿನ್ಯಾ:ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕಿನ್ಯಾ: ಕೇಶವ ಶಿಶು ಮಂದಿರ ಕಿನ್ಯಾ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಟ್ಟಿಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಸೂರ್ಯ ಫ್ರೆಂಡ್ಸ್ ವಿದ್ಯಾನಗರ ಇದರ ಸಹಕಾರದೊಂದಿಗೆ ಮುದ್ದುಕೃಷ್ಣ ವೇಷಾಧಾರಿ ಪುಟಾಣಿಗಳಿಂದ ಶೋಭಾಯಾತ್ರೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಜಾಗೃತ ವಿವಿದ್ದೋದ್ದೇಶ ಸಹಕಾರಿ ಸಂಘ ಉಳ್ಳಾಲ ಇದರ ಅಧ್ಯಕ್ಷ ರಘುಚಂದ್ರ ಬಲ್ಲಾಳ ಹಾಗೂ ಅವರ ಪತ್ನಿ ಮಮತಾ ಆರ್ ಬಲ್ಲಾಳ, ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸಿ.ಎ. ರಾಜ್ ಪ್ರವೀಣ್ ಮತ್ತು ಅವರ ಪತ್ನಿ ಭಾರತಿ, ಶಿಶು ಮಂದಿರದ ಅಧ್ಯಕ್ಷ ಶಿವರಾಮ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಕಜೆ, ಸೂರ್ಯ ಫ್ರೆಂಡ್ಸ್ ಅಧ್ಯಕ್ಷ ದಾಮೋದರ ಉಪಸ್ಥಿತರಿದ್ದರು.
ಕೇಶವ ಕಜೆ ಸ್ವಾಗತಿಸಿದರು. ರವಿ ಕಣಕ ಮೊಗೇರು ವಂದಿಸಿದರು.

Exit mobile version