Site icon Ullalavani

ಕೊಣಾಜೆ: ಸರಣಿ ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯ ಬಂಧನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಕೊಣಾಜೆ ಸರಣಿ ಕಳ್ಳತನ, ಹಾರ್ಡ್‍ವೇರ್‍ಗೆ ಬೆಂಕಿ ಹಾಕಿದ ಪ್ರಕರಣ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಾರ್ನಮಿಕಟ್ಟೆ ನಿವಾಸಿ ಫರಾಝ್(21) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.


ಕೊಣಾಜೆಯಲ್ಲಿ ಸರಣಿ ಕಳ್ಳತನ ನಡೆಸಿ ಹಾರ್ಡ್‍ವೇರ್ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದಾಗ ಬೆಂಕಿ ಅವಘಡದಿಂದ ಸುಮಾರು 60 ಲಕ್ಷ ರೂ. ನಷಟ್ಟಕ್ಕೆ ಕಾರಣವಾಗಿದ್ದ ತಂಡದಲ್ಲಿದ್ದ ಫರಾಝ್‍ನ ಮೇಲೆ ಕೊಣಾಜೆಯಲ್ಲಿ ಕಳ್ಳತನ ಸೇರಿದಂತೆ ಸುಮಾರು 5 ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಸುರತ್ಕಲ್‍ನಲ್ಲಿ 2 ಪ್ರಕರಣಗಳಲ್ಲಿ ಆರೋಪಿಯಾಗಿರುವ ಫರಾಝ್‍ನ ಮೇಲೆ ಉಳ್ಳಾಲದಲ್ಲಿ ಜಾಯ್‍ಲ್ಯಾಂಡ್ ಕಳ್ಳತನ, ಕೊಲೆ ಯತ್ನ , ಕಳವು ಆರೋಪಕ್ಕೆ ಸಂಬಂಧಿಸಿದಂತೆ ಮೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.

ಪೊಲೀಸ್ ಕಮಿಷನರ್ ಮುರುಗನ್, ಡಿಸಿಪಿಗಳಾದ ಶಾಂತರಾಜ್, ಸಂಜೀವ್ ಪಾಟೀಲ್, ಎಸಿಪಿ ಕಲ್ಯಾಣ ಶೆಟ್ಟಿ ನಿರ್ದೇಶನದಲ್ಲಿ ಉಳ್ಳಾಲ ಇನ್‍ಸ್ಪೆಕ್ಟರ್ ಸವಿತ್ರ ತೇಜ, ಎಸ್‍ಐಗಳಾದ ಭಾರತಿ ರಾಜೇಂದ್ರ, ಎಎಸ್‍ಐಗಳಾದ ಮೋಹನ್‍ದಾಸ್, ವಿಜಯರಾಜ್, ಸಿಬ್ಬಂದಿಗಳಾದ ಮೋಹನ್, ರಾಜಾರಾಮ್, ದಿನೇಶ್, ರಂಜಿತ್, ಮಹೇಶ್, ಪ್ರಶಾಂತ್ ಲಿಂಗರಾಜು, ಶೋನ್‍ಷಾ ಸೇರಿದಂತೆ ಇತರ ಸಿಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು

Exit mobile version