Site icon Ullalavani

ಗೃಹರಕ್ಷಕಿಯರ ನಿಸ್ತಂತು ಚಾಲನಾ ತರಬೇತಿ; ಉಳ್ಳಾಲ ಘಟಕದ ಮೆರಿಟಾ ಡಿ’ಸೋಜ `ಪ್ರಥಮ’

ಉಳ್ಳಾಲ.ಅ,28: ಬೆಂಗಳೂರಿನಲ್ಲಿ ನಡೆದ ಗೃಹರಕ್ಷಕಿಯರ ನಿಸ್ತಂತು ಚಾಲನಾ ತರಬೇತಿಯಲ್ಲಿ ರಾಜ್ಯದ 27 ಜಿಲ್ಲೆಗಳ ಗೃಹರಕ್ಷಕರು ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಘಟಕದ ಮೆರಿಟಾ ಡಿ’ಸೋಜ ಯಶಸ್ವಿಯಾಗಿ ತರಬೇತಿ ಪೂರೈಸಿದ್ದಾರೆ.

ಮೆರಿಟಾ ಡಿಸೋಜ ಅವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ವಿಜೇತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕದಳ ಇಲಾಖೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ. ಇವರನ್ನು ಗೃಹರಕ್ಷಕ ಇಲಾಖೆಯ ಇನ್‌ಸ್ಪೆಕ್ಟರ್ ಯತೀಶ್ ಮತ್ತು ನಿಸಂತ್ತು ಇಲಾಖೆಯ ಸಬ್ ಇನ್ಸ್ಪೆಕ್ಟರ್ ವಿಠಲ್ ಅಭಿನಂದಿಸಿದ್ದಾರೆ.

Exit mobile version