Site icon Ullalavani

ಇನಾಯತ್ ಅಲಿ ಅಭಿಮಾನಿ ಬಳಗ ಕೋಡಿಕಲ್ ವತಿಯಿಂದ ಸೌಹಾರ್ದ ದೀಪಾವಳಿ

ಸುರತ್ಕಲ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಇನಾಯತ್ ಅಲಿ ಅಭಿಮಾನಿ ಬಳಗ ಕೋಡಿಕಲ್ ವತಿಯಿಂದ ಸೌಹಾರ್ದ ದೀಪಾವಳಿ ಕಾರ್ಯಕ್ರಮವು ರವಿವಾರ ಕೋಡಿಕಲ್ ನಲ್ಲಿ ನಡೆಯಿತು.

ಸಮಾರಂಭವನ್ನು ಗಣ್ಯರು ದೀಪಬೆಳಗಿ ಉದ್ಘಾಟಿಸಿದರು . ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ ಅವರು, ಭಾರತ ವೈವಿದ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ದೇಶ ಈ ವೈವಿಧ್ಯಮಯ ಭಾರತವನ್ನು ಇನಾಯತ್ ಅಲಿ ಅವರು ಸೌಹಾರ್ದ ದೀಪಾವಳಿ ಕಾರ್ಯಕ್ರಮ ಎಲ್ಲಾ ಜಾತಿ ಧರ್ಮಗಳನ್ನು ಒಂದುಗೂಡಿಸುವ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಮನುಷ್ಯರಿಗೆ ಸೌಹಾರ್ದಯುತ ಬದುಕು ಬೇಕಾಗಿದೆ. ಉತ್ತಮ ಸ್ವಾಸ್ಥ್ಯ ಜೀವನಕ್ಕೆ ಇಂತಹಾ ಕಾರ್ಯಕ್ರಮ ಪ್ರೇರಣೆ, ಮುಂದಿನ ದಿನಗಳಲ್ಲಿ ಸರ್ವರನ್ನೂ ಒಗ್ಗೂಡಿಸುವ ಇನ್ನಷ್ಟು ಸೌಹಾರ್ದ ಹಬ್ಬಗಳು ನಡೆದು ಸೌಹಾರ್ದಯುತ ಬದುಕು ಕಾಣುವಂತಾಗಲಿ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ದೀಪಾವಳಿ ಕೇವಲ ದೀಪಗಳನ್ನು ಬೆಳಗಿ ಕತ್ತಲೆ ದೂರಮಾಡುವ ಹಬ್ಬವಲ್ಲ ಇದು ಜಾತಿ, ಧರ್ಮ, ಮತ, ಪಂಗಡ, ಪಕ್ಷ ಇವೆಲ್ಲವನ್ನು ಮೀರಿ ಕೇವಲ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬವಾಗಿದೆ ದೀಪಾವಳಿ ದುಷ್ಟತನವನ್ನು ಅಳಿಸಿ ಶಿಷ್ಟತನವನ್ನು ಬೆಳೆಸುವ ಹಬ್ಬವಾಗಿದೆ. ಎಲ್ಲಾ ಹಬ್ಬಗಳನ್ನು ಸೌಹಾರ್ದದಿಂದ ಎಲ್ಲರೂ ಒಗ್ಗೂಡಿಕೊಂಡು ಆಚರಿಸುವುದಾಗಿದೆ ಪ್ರಜಾಪ್ರಭುತ್ವ ಭಾರತ ದೇಶದ ಸೌದರ್ಯ ಎಂದರು.

ಸಮಾರಂಭದಲ್ಲಿ ಹಲವು ಸ್ಥಳೀಯ ಅಶಕ್ತ ಕುಟುಂಬಗಳಿಗೆ ಇನಾಯತ್ ಅಲಿ ಅವರ ಐಆ್ಯಮ್ ಫೌಂಡೇಶನ್ ವತಿಯಿಂದ ಸಹಾಯಧನ ವಿತರಿಸಲಾಯಿತು. ಅಲ್ಲದೆ ಸ್ಟೇಟಿಂಗ್ ನಲ್ಲಿ ಸಾಧನೆಗೈದ ಇಬ್ಬರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಬಿಲ್ಲವ ಮಹಾ ಮಂಡಲದ ನೂತನ ಅಧ್ಯಕ್ಷ ಸೂರ್ಯಕಾಂತ್, ಕೋಡಿಕಲ್ ಜುಮಾ ಮಸೀದಿಯ ಖತೀನ್ ಮರ್ಝೂಕ್ ಝುಹರಿ ಮಾತನಾಡಿದರು. ವಕ್ಸ್ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಚಿತ್ರಾಪುರ, ಕೆಪಿಸಿಸಿ ಸದಸ್ಯ ಸದಾಶಿವ ಶೆಟ್ಟಿ ಯೂತ್ ಕಾಂಗ್ರೆಸ್ ನ ಗಿರೀಶ್ ಅಳ್ವ ಮುಖಂಡರಾದ ಪದ್ಮನಾಭ ಅಪ್ಪಿ ಶಕುಂತಲಾ ಕಾಮತ್, ಸುರೇಂದ್ರ ಕಂಬಳಿ, ಪೃಥ್ವಿರಾಜ್ ಆರ್.ಕೆ. ಅನಿಲ್‌ಕುಮಾರ್, ಕೇಶವ ಸನಿಲ್, ಕೃಷ್ಣ ಅಮೀನ್, ಉಮೇಶ್ ದಂಡಕೇರಿ, ಭಾಷಾ ಗುರುಪುರ, ಜಯಲಕ್ಷ್ಮಿ, ಸಾರಿಕಾ ಪೂಜಾರಿ, ಶಶಿಕಲಾ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.

‘ಸುರತ್ಕಲ್ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಧನ್ಯವಾದ ಸಮರ್ಪಿಸಿದರು. ಪ್ರಿಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version