ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಹಿಂದೂ ಧರ್ಮದ ಪವಿತ್ರ ಗ್ರಂಥವಾದ ಭಗವದ್ಗೀತೆಯ ಬಗ್ಗೆ ವಿಚಾರವಾದಿಗಳು ಕೇವಲವಾಗಿ ಮಾತನಾಡುವ ಬದಲು ಅದನ್ನು ವಿಮರ್ಶಿಸಿ, ಅಧ್ಯಯಿಸಿದರೆ ಭಗದ್ಗೀತೆಯ ಮೌಲ್ಯಗಳು ತಿಳಿಯುತ್ತದೆ, ಪ್ರತಿ ಹಿಂದೂ ಮನೆಯಲ್ಲಿ ಇಂತಹ ಗ್ರಂಥಗಳು ಇದ್ದರೆ ಸಾಲದು ಅದನ್ನು ಮಕ್ಕಳಿಗೆ ಬೋಧಿಸುವಂತಹ ಕೆಲಸಗಳು ತಾಯಿಯಂದಿರಿಂದ ಆಗಬೇಕು ಆಗ ಮಕ್ಕಳು ಸಂಸ್ಕಾರಯುತವಾಗಿ ಬೆಳೆಯಲು ಸಾಧ್ಯ ಎಂದು ತುಳು ಸಾಹಿತ್ಯ ಪರಿಷತ್‍ನ ಮಾಜಿ ಸದಸ್ಯ ದಯಾನಂದ ಕತ್ತಲ್‍ಸಾರ್ ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಮಂಗಳೂರು ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಶುಭಕರ ಚೌಟ ಎಕ್ಕೂರು, ಶ್ರೀನಿವಾಸ್ ಎಕ್ಕೂರು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಚೌಟ, ಚಿತ್ರ ನಿರ್ಮಾಪಕ ಹೇಮಂತ್ ಸುವರ್ಣ, ಹಿರಿಯರಾದ ತನಿಯಪ್ಪ ಎಕ್ಕೂರು, ಅಯ್ಯಪ್ಪ ಭಜನಾ ಮಂದಿರದ ಅರುಣ್, ರವಿಚಂದ್ರ ಎಕ್ಕೂರು, ಭರತ್ ಶೆಟ್ಟಿ ಎಕ್ಕೂರು, ಧನಂಜಯ ಎಕ್ಕೂರು, ಉಪಸ್ಥಿತರಿದ್ದರು. ಸುಮಾರು 300 ಮನೆಗಳಿಗೆ ಭಗವದ್ಗೀತೆಯನ್ನು ಉಚಿತವಾಗಿ ವಿತರಿಸಲಾಯಿತು.
ಕೇಶವ ಸಾಲ್ಯಾನ್ ಸ್ವಾಗತಿಸಿದರು, ಫ್ರಫುಲ್ಲ ಶೆಟ್ಟಿ ವಂದಿಸಿದರು.