ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ರಾಜ್ಯದಲ್ಲಿ ಅಂತರ್ಜಾಲದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಆಳಕ್ಕೆ ಕುಸಿಯುತ್ತಿರುವುದರಿಂದ ಅಂತರ್ಜಾಲ ಮಟ್ಟವನ್ನು ಹೆಚ್ಚಿಸಲು ಗಿಡಗಳನ್ನು ಹೆಚ್ಚು ವೃದ್ಧಿಸುವ ಭಾಗವಾಗಿ ಮತ್ತು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಣಚೂರು ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಕಾರ್ಯ ರೂಪಿಸಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಇಕ್ಬಾಲ್ ಅಹಮ್ಮದ್ ಯು.ಟಿ. ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಬಳಿಕ ಎನ್.ಎಸ್.ಎಸ್. ಸ್ವಯಂ ಸೇವಕರು ಗಿಡಗಳನ್ನು ನೆಟ್ಟರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಜೀವನ್ ರಾಜ್, ಸಹಯೋಜನಾ„ಕಾರಿಗಳಾದ ಸುಜಾತ, ನಿರ್ಮಲಾ, ಉಪನ್ಯಾಸಕ ಅವಿನಾಶ್ ಎಸ್. ಎಂ. ಮತ್ತು ಎನ್.ಎಸ್.ಎಸ್. ಸ್ವಯಂ ಸೇವಕಿ ಹಫೀಝ, ಅಸ್ಮ, ಮುನಿಶಾ, ನಸ್ರೀಯಾ, ಲಿಖಿತಾ, ನಿಶಾ ಉಪಸ್ಥಿತರಿದ್ದರು.