Site icon Ullalavani

ತಾಯಿ ಸಮಾನಳಾದ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ;ಚಂದ್ರಿಕಾ ರೈ


ಉಳ್ಳಾಲ: ಅ-23; ತಾಯಿ ಸಮಾನಳಾದ ಗೋವಿನಲ್ಲಿ ಮುಕ್ಕೋಟಿ ದೇವತೆಗಳೇ ನೆಲೆಸಿದ್ದಾರೆಂಬ ನಂಬಿಕೆ ನಮ್ಮೆಲ್ಲರದ್ದಾಗಿದೆ. ದೇಶದ ಕೃಷಿ ಪ್ರಧಾನ ಸಂಸ್ಕೃತಿಯಲ್ಲೂ ಗೋವಿಗೆ ವಿಶೇಷ ಪ್ರಾತಿನಿಧ್ಯವಿದ್ದು,ನಮ್ಮ ಶ್ರೇಷ್ಟ ಸಂಸ್ಕೃತಿಯನ್ನ ಯುವ ಪೀಳಿಗೆಗೂ ಪರಿಚಯಿಸಲು ಕಾಂಗ್ರೆಸ್ ಪಕ್ಷದ ವತಿಯಿಂದ ವೇದಿಕೆ ಸಿಕ್ಕಿರುವುದು ಶ್ಲಾಘನೀಯವೆಂದು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರಾದ ಚಂದ್ರಿಕಾ ರೈ ಹೇಳಿದರು‌.

ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಕೊಲ್ಯದ ನಾರಾಯಣ ಸಫಲ್ಯ ಅವರ ಮನೆಯಲ್ಲಿ ಬುಧವಾರದಂದು ನಡೆದ ಸಾಮೂಹಿಕ “ಗೋ ಪೂಜೆ” ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು.

ಕ್ಷೇತ್ರದ ಶಾಸಕರು ,ವಿದಾನಸಭೆಯ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಅವರು ಪ್ರತೀ ವರುಷವೂ ಗೋಪೂಜೆಯನ್ನ ನಡೆಸಲು ಸಲಹೆ ನೀಡುತ್ತಾ ಬಂದಿದ್ದಾರೆ.ಅವರ ಸದಾಶಯದಂತೆ ಮಹಿಳಾ ಕಾಂಗ್ರೆಸ್ ವತಿಯಿಂದ‌ ಗೋಪೂಜೆ ನಡೆಸಲಾಗಿದೆಯೆಂದರು.


ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ಮಾತನಾಡಿ ಕರ್ನಾಟಕ ಸರಕಾರವೇ ಮುಜರಾಯಿ ಇಲಾಖೆಗೊಳಪಟ್ಟ ಪ್ರತೀ ಧಾರ್ಮಿಕ ಕ್ಷೇತ್ರಗಳಲ್ಲೂ ಗೋಪೂಜೆಯನ್ನ ಆಯೋಜಿಸಿದೆ.ಆ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಗೋಪೂಜೆಗೆ ವಿಶೇಷ ಆದ್ಯತೆ ನೀಡಿದ್ದಾರೆ.ಗೋವು ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವಾಗಿದೆಯೆಂದರು.


ಜಿಲ್ಲಾ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಅಪ್ಪಿ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ,ಮಾಜಿ ತಾ.ಪಂ ಸದಸ್ಯರಾದ ಸುರೇಖಾ ಚಂದ್ರಹಾಸ್,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ದಿನೇಶ್ ರೈ, ಯುವ ನಾಯಕರಾದ ಯು.ಟಿ.ಫರೀದ್,ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷರಾದ ಅಮಿತಾ ಅಶ್ವಿನ್,ಉಳ್ಳಾಲ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಶಾಂತಿ ಡಿಸೋಜ,ಸೋಮೇಶ್ವರ ಪುರಸಭಾ ಸದಸ್ಯರಾದ ಪುರುಷೋತ್ತಮ ಶೆಟ್ಟಿ ಪಿಲಾರು,ನಾಮ ನಿರ್ದೇಶಿತ ಸದಸ್ಯರಾದ ಪ್ರೇಮ್ ಕೊಲ್ಯ,ಪ್ರಮುಖರಾದ ದಮಯಂತಿ,ಪ್ರೇಮಾ ಮೂಗಪ್ಪ,ಶಾಲಿನಿ ಶೆಟ್ಟಿ ಸೋಮೇಶ್ವರ,ಮನ್ಸೂರ್ ಮಂಚಿಲ,ಪವನ್ ರಾಜ್ ಕೊಲ್ಯ,ದಿನೇಶ್ ಶೆಟ್ಟಿ ಕೆರೆಬೈಲ್ ಮೊದಲಾದವರು ಉಪಸ್ಥಿತರಿದ್ದರು.

Exit mobile version