ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ 10 ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದಾಗ ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ.
ಆರೋಪಿಯನ್ನು ಕೇರಳದ ಕಾಸರಗೋಡಿನ ಅಬ್ದುಲ್ಲಾ (40) ಎಂದು ಗುರುತಿಸಲಾಗಿದೆ. ಈತ ಸ್ನೇಹಿತನೊಂದಿಗೆ ಈಚರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ, ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆ ಮೀರಿ ವಾಹನ ನಿಲ್ಲಿಸದೇ ಹೋದ ಆರೋಪಿಯ ವಾಹನವನ್ನು ಪೊಲೀಸರು ಸುಮಾರು 10ಕಿ.ಮೀ. ದೂರ ಹಿಂಬಾಲಿಸಿದ್ದಾರೆ. ಈ ಸಂದರ್ಭ ಆರೋಪಿಯು ಪೊಲೀಸರ ಜೀಪಿಗೆ ಹಿಂಭಾಗದಿAದ ಢಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ಆಗ ಪಿಎಸ್‌ಐ ಎರಡು ಸುತ್ತು ಗುಂಡುಗಳನ್ನು ಹಾರಿಸಿದ್ದು, ಒಂದು ಈಚರ್ ವಾಹನದ ಮೇಲೆ ಹಾಗೂ ಇನ್ನೊಂದು ಗುಂಡು ಆರೋಪಿ ಅಬ್ದುಲ್ಲಾನ ಕಾಲಿಗೆ ಬಿದ್ದಿದೆ. ಘಟನೆ ಸಂದರ್ಭದಲ್ಲಿ ಇನ್ನೊರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಅಬ್ದುಲ್ಲಾ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮಂದುವರಿಸಿದ್ದಾರೆ.
ಈತನ ಮೇಲೆ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 22/2025 ಗೋಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
