Site icon Ullalavani

“ಸಾರ್ವಜನಿಕ ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ಮೊದಲ ಆದ್ಯತೆಯಾಗಿರಲಿ”:ಮಂಜುನಾಥ ಪೂಜಾರಿ

ಶ್ರೀ ನಾರಾಯಣ ಗುರು ಯುವ ವೇದಿಕೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ಸಾರ್ವಜನಿಕ ಶ್ರೀ ನಾರಾಯಣ ಗುರು ಉದ್ಯಾನವನದ ನಿರ್ಮಾಣ ನಮ್ಮೆಲ್ಲರ ಮೊದಲ ಆದ್ಯತೆ. ಅದರ ನಿರ್ಮಾಣಕ್ಕೆ ಸಕಲ ಸಮಾಜ ಬಾಂಧವರು ಸಹಕಾರ ನೀಡಬೇಕು ಮತ್ತು ಕರ್ನಾಟಕ ಸರಕಾರದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಈ ಯೋಜನೆಗೆ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕರ್ನಾಟಕ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದರು.

ಉದ್ಯಾವರಬಲಾಯಿಪಾದೆÀಹದ್ದಾರಿ ಬಳಿ ನಿರ್ಮಾಣಗೊಳ್ಳಲಿರುವ ಶ್ರೀ ನಾರಾಯಣಗುರು ಉದ್ಯಾನವನದ ಬಳಿ ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ ಇವರ ಆಶ್ರಯದಲ್ಲಿ ನಡೆದ ದೀಪಾವಳಿ ಹಬ್ಬದÀ ಸಂಭ್ರಮಕ್ಕೆ ನಾರಾಯಣ ಗುರುಗಳ ಬೃಹತ್ ಗೂಡುದೀಪ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ನಾಡಿನ ಸಮಸ್ತ ಬಾಂಧವರಿಗೆ ದೀಪಾವಳ ಹಬ್ಬದ ಶುಭಾಶಯ ಸಲ್ಲಿಸಿದರು.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಆಗಮಿಸಿದ ಮಂಜುನಾಥ ಪೂಜಾರಿ ಅವರನ್ನು ಸಮಾನಿಸಲಾಯಿತು.

ಈ ಸಂಧರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ನಾರಾಯಣ ಗುರು ಯುವ ವೇದಿಕೆಗೌರವಾಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ ದಿನೇಶ್ ಜತ್ತನ್ ಆರೂರುತೋಟ, ಕಿರಣ್ ಕುಮಾರ್ ಉದ್ಯಾವರ ಗಿರೀಶ್ ಕುಮಾರ್. ದಿವಾಕರ್ ಉದ್ಯಾವರ, ಹರೀಶ ಪೂಜಾರಿ ಮಲ್ಪೆ, ಸುನಿಲ್ ಪೂಜಾರಿ ಮಲ್ಟಿ, ಸುಜಯ್ ಪೂಜಾರಿ ನಿಟ್ಟೂರು, ಶೇಖರ ಕೋಟ್ಯಾನ್, ಸಾಯಿ ರಾಜ್ ಕಿರಿಯೂರು, ಸಚಿನ್ ಸಾಲ್ಯಾನ್, ಲಕ್ಷಣ ಸನಿಲ್, ಸತೀಶ್ ಪೂಜಾರಿ, ನವೀನ್ ಪೂಜಾರಿ, ಸಂದೇಶ ಪೂಜಾರಿ ರಾಯ್ಸ್ ಫರ್ನಾಂಡಿಸ್, ಗುಣಕರಸೆಲ್, ಕೇಶದ ಸನಿಲ್, ಸುಪ್ರೀತ್ ಸುವರ್ಣ ಇರ್ಫಾನ್, ನೋನ್ ಪೂಜಾರಿ ಮತ್ತಿತರರು ಉಪ್ಪಾತುದ್ದರು. ಶ್ರೀ ನಾರಾಯಣ ಗುರು ಯುವ ವೇದಿಕೆ ಅಧ್ಯಕ್ಷ ಮಿಥುನ್ ಅಮೀನ್ ಸ್ವಾಗತಿಸಿದರು. ದಿನೇಶ್ ಜತ್ತನ್ ನಿರೂಪಿಸಿ ವಂದಿಸಿದರು.

Exit mobile version