Site icon Ullalavani

ಅಸೈಗೋಳಿ ಬಂಟರ ಭವನದಲ್ಲಿ 22ನೇ ವರ್ಷದ ಸಾಮೂಹಿಕ ದುರ್ಗಾಪೂಜೆ ಸಂಪನ್ನ

ಅಸೈಗೋಳಿ: ಬಂಟರ ಸಂಘ ಉಳ್ಳಾಲ ವಲಯ, ಅಸೈಗೋಳಿ ಕೊಣಾಜೆ ಹಾಗೂ ಸಿರಿ ಮಹಿಳಾ ಉಳಿತಾಯ ಗುಂಪುಗಳ ಒಕ್ಕೂಟದ ಆಶ್ರಯದಲ್ಲಿ 22ನೇ ವರ್ಷದ ಸಾಮೂಹಿಕ ದುರ್ಗಾಪೂಜೆ ಅಸೈಗೋಳಿ ಬಂಟರ ಭವನದಲ್ಲಿ ಸಂಪನ್ನಗೊ0ಡಿದೆ. ಬೆಳಗ್ಗೆ ಧಾರ್ಮಿಕ ಸಭೆ ನಡೆದಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರು ವಹಿಸಿದ್ರು. ಬಳಿಕ ಕಾರ್ಯಕ್ರಮಕ್ಕ ಶುಭಹಾರೈಸಿದ್ರು.

ಇದೇ ವೇಳೆ ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಆಶಾ ಜ್ಯೋತಿ ರೈ ಮಾತನಾಡಿ, ಸಿರಿ ಮಹಿಳಾ ಉಳಿತಾಯ ಸ್ವಸಹಾಯ ಗುಂಪುಗಳಿAದ ಹಲವಾರು ಮಹಿಳೆಯರು ಸದೃಢತೆಯ ಬದುಕನ್ನ ಜೀವಿಸಲು ಆಶಾಕಿರಣವಾಗಿದೆ. ಮಹಿಳೆಯರಿಗೆ ಉಳಿತಾಯ ಅವಶ್ಯಕತೆ ತುಂಬಾನೇ ಇರತ್ತೆ ಎಂದ್ರು.

ಇನ್ನು ಈ ಪುಣ್ಯಕಾರ್ಯದಲ್ಲಿ ಹರೇಕಳ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತಸರರಾದ ಮೋಹನ್‌ದಾಸ್ ರೈ ಡೆಬ್ಬೇಲಿಗುತ್ತು, ಉದ್ಯಮಿ ಜಗದೀಶ್ ಆಳ್ವ ನಾರ್ಯಗುತ್ತು, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ ಸೇರಿದಂತೆ ಹಲವರು ಭಾಗಿಯಾಗಿ ಕಾರ್ಯಕ್ರಮಕ್ಕೆ ಶುಭಕೋರಿದ್ರು.

ಬಂಟರ ಸಂಘ ಉಳ್ಳಾಲ ವಲಯ, ಸಿರಿ ಮಹಿಳಾ ಉಳಿತಾಯ ಗುಂಪುಗಳ ಒಕ್ಕೂಟ, ಯುವ ವಿಭಾಗ, ಮಹಿಳಾ ವಿಭಾಗ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದ ಅಧ್ಯಕ್ಷರು ಮತ್ತು ಸದಸ್ಯರು ಸಭೆಯ ಯಶಸ್ಸಿಗೆ ಶ್ರಮಿಸಿದರು.

ಕಾರ್ಯಕ್ರಮವು ಧಾರ್ಮಿಕ ಪೂಜೆ, ಪ್ರಾರ್ಥನೆ ಮತ್ತು ಪ್ರಸಾದ ವಿತರಣೆಯೊಂದಿಗೆ ಸಮಾಪನಗೊಂಡಿತು.

Exit mobile version