Site icon Ullalavani

ಜಾಗತಿಕ ಬಿಲ್ಲವರ ಕ್ರೀಡೋತ್ಸವ – 2026; ಲೋಗೋ ಅನಾವರಣಗೊಳಿಸಿದ ನಟ ಡಾ.ಶಿವರಾಜ್ ಕುಮಾರ್

ಬೆಂಗಳೂರು:  ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಕುದ್ರೋಳಿ, ಮಂಗಳೂರು ಇದರ ವತಿಯಿಂದ 2026 ರ ಜನವರಿ 18 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಪ್ರಪ್ರಥಮ ಜಾಗತಿಕ ಬಿಲ್ಲವರ ಕ್ರೀಡೋತ್ಸವದ ಲೋಗೋವನ್ನು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್‌ರವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಡಾ.ಶಿವರಾಜ್ ಕುಮಾರ್‌ರವರು, ಯುವ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ನೀಡುವ ಜೊತೆಯಲ್ಲಿ ಸಮಾಜವನ್ನು ಸಂಘಟಿಸುವ ಮಹತ್ಕಾರ್ಯ ಮಾಡುತ್ತಿರುವ ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಕಾರ್ಯಕ್ರಮಗಳು ಶ್ಲಾಘನೀಯ. ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ, ಎಲ್ಲರೂ ಒಂದಾಗಿ ಬೆರೆತು ಮಾದರಿ ಕಾರ್ಯಕ್ರಮವನ್ನಾಗಿ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ಯೂನಿಯನ್‌ನ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣರವರು  ಮಾತನಾಡಿ, ಯೂನಿಯನ್ ಮೂಲಕ ಹಲವಾರು ದೊಡ್ಡ ಮಟ್ಟದ ಮತ್ತು ಸಮಾಜದ ಪ್ರಪ್ರಥಮ ಕಾರ್ಯಕ್ರಮಗಳು ಬಹಳ ಯಶಸ್ವಿ ಯಾಗಿ ನಡೆದಿದೆ. ಈ ಕ್ರೀಡೋತ್ಸವ ಕೂಡಾ ಅಭೂತಪೂರ್ವ ವಾಗಿ ನಡೆಯಬೇಕು, ವಿಶ್ವಮಟ್ಟದಲ್ಲಿ ಸಮಾಜಕ್ಕೆ ಶಕ್ತಿ ನೀಡುವ ಕಾರ್ಯಕ್ರಮವಾಗಬೇಕು. ಈ ದೃಷ್ಟಿಯಿಂದ ಲೋಗೋ ಬಿಡುಗಡೆ ಯನ್ನು ಕನ್ನಡದ ವರನಟ ಡಾ.ರಾಜ್ ಕುಮಾರ್ ರವರ ಸುಪುತ್ರ ಡಾ.ಶಿವರಾಜ್ ಕುಮಾರ್ ರವರ ಹಸ್ತದಲ್ಲಿ ನಡೆಸಿದ್ದೇವೆ. ತಮ್ಮ ಅಮೂಲ್ಯವಾದ ಸಮಯವನ್ನು ಈ ಕಾರ್ಯಕ್ರಮ ಕ್ಕಾಗಿ ನೀಡಿರುವ ಅವರಿಗೆ ಯೂನಿಯನ್ ವತಿಯಿಂದ ಕೃತಜ್ಞತೆಗಳು ಎಂದರು.

ಈ ಸಂದರ್ಭದಲ್ಲಿ ಯೂನಿಯನ್‌ನ ಉಪಾಧ್ಯಕ್ಷರಾದ ಕೆ.ಟಿ.ಸುವರ್ಣ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟು, ಸಂಘಟನಾ ಕಾರ್ಯದರ್ಶಿ ಗಳಾದ ಉದಯಚಂದ್ರ ಡಿ.ಸುವರ್ಣ, ಎ.ಜೆ.ಶೇಖರ್,

ಕ್ರೀಡಾ ಪ್ರಧಾನ ಸಂಚಾಲಕರು ಸದಾನಂದ ಪೂಜಾರಿ, ಪ್ರಮುಖರಾದ ಸತೀಶ್ ಕರ್ಕೇರ, ಸಂದೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Exit mobile version