Site icon Ullalavani

ಸರಕಾರದ ನಿರ್ಲಕ್ಷ್ಯವೇ ಚಾಂದಿನಿ ಸಾವಿಗೆ ಕಾರಣವಾಯಿತಾ..??? ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಸುಳ್ಯ: ವಿರಳ ಹಾಗೂ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರ ನಿವಾಸಿ ಚಾಂದಿನಿ ಸಾವು ಬದುಕಿನ ಹೋರಾಟದಲ್ಲಿ ಸೋಲುಂಡು ಇಹಲೋಕ ತ್ಯಜಿಸಿದ್ದಾರೆ.

ಕಳೆದ 35 ವರ್ಷಗಳಿಂದ ಥರಾವರಿ ಖಾಯಿಲೆಗಳೊಂದಿಗೆ ಹೋರಾಡಿ ಸ್ಥೆöÊರ್ಯದ ಬದುಕು ನಡೆಸುತ್ತಿದ್ದ ಗಟ್ಟಿಗಿತ್ತಿ ಹೆಣ್ಣುಮಗಳು ಸರಕಾರದ ಬೇಜವಬ್ದಾರಿಗೆ ಕೊನೆಯುಸಿರೆಳೆದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸುಳ್ಯದ ನಾವೂರು ನಿವಾಸಿ ದಿ.ಧನಂಜಯ ಮತ್ತು ಸರೋಜಿನಿ ದಂಪತಿಯ ಪುತ್ರಿಯಾದ ಚಾಂದಿನಿ ಕಿತ್ತು ತಿನ್ನುವ ಅನಾರೋಗ್ಯ, ನೋವು ಕೊಡುವ ಖಾಯಿಲೆ, 20ಕ್ಕೂ ಅಧಿಕ ಬಾರಿ ವಿವಿಧ ರೀತಿಯ ಶಸ್ತçಚಿಕಿತ್ಸೆ, ಹತ್ತು ಬಾರಿ ಕೃತಕ ಉಸಿರಾಟ, ಶಾಕ್ ಟ್ರೀಟ್‌ಮೆಂಟ್, ಕಿಮೋಥೆರಪಿ, ಪರಿಣಾಮಕಾರಿಯಾದ ಔಷಧಿಯ ಸೇವನೆ ಇಂತಹ ದುಸ್ಥಿತಿಯ ಸವಾಲಿನ ಜೀವನವನ್ನು ನಡೆಸಿದ್ದವರು ಈ ಚಾಂದಿನಿ.

ಚಿಕಿತ್ಸೆಗಾಗಿ ಲಕ್ಷ ಲಕ್ಷ ವ್ಯಯಿಸಿದರೂ ಆರೋಗ್ಯ ಸುಧಾರಿಕೆ ವಿಫಲವಾಯಿತು. ಕೊನೆಗೆ ಸರಕಾರ ಕದ ತಟ್ಟಿ ಉಚಿತಾ ಚಿಕಿತ್ಸೆಗೆ ಅರ್ಜಿ ಸಲ್ಲಿಸಿದರೂ ಅನುಷ್ಠಾನದ ಹಾದಿಯಲ್ಲಿ ಯಾವುದೇ ಬೆಂಬಲ ಸಿಗದೇ ಬದುಕು ಮುಸುಕಾದಾಗ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದರು.

ಹಲವು ವಿಚಾರಗಳಿಗೆ ಮೂಗುತೂರಿಸುಕೊಂಡು ಬರುವ ಸರಕಾರ ಇಂದು ಚಾಂದಿನಿ ಜೀವ ಉಳಿಸಲು ನೆರವಾಗಲೇ ಇಲ್ಲ. ಎಲ್ಲಾ ಪಕ್ಷಗಳು ಒಬ್ಬರೊಬ್ಬರ ಮೇಲೆ ಮಾತಿನ ಪ್ರಹಾರ ನಡೆಸುವಲ್ಲಿ ಬ್ಯುಸಿಯಾಗಿ ಬಿಟ್ಟಿದ್ದರು. ಇದರ ನಡುವೆ ಚಾಂದಿನಿಯ ನೋವು, ಆಕೆಯ ಮಗಳು ತಾಯಿಗಾಗಿ ಹಂಬಲಿಸುತ್ತಿರುವ ವ್ಯಥೆ ಯಾವುದೇ ಪಕ್ಷಗಳ ನಾಯಕರ ಅರಿವಿಗೆ ಬರಲೇ ಇಲ್ಲ.

ಈ ಹಿಂದೆ ಚಾಂದಿನಿಯವರಿಗೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಕರ್ನಾಟಕಕ್ಕೆ ವಾಪಾಸಾಗಿದ್ದರು. ಕರ್ನಾಟಕದ ಮೂರು ಆಸ್ಪತ್ರೆಯಲ್ಲಿ ಈ ವಿರಳ ಕಾಯಿಲೆಗೆ ಚಿಕಿತ್ಸೆಯಿದೆ. ಆದ್ರೆ ಸಕಾಲದಲ್ಲಿ ಹಣ ಬಿಡುಗಡೆ ಮಾಡದೇ ಸರಕಾರ ನಿರ್ಲಕ್ಷö್ಯ ವಹಿಸಿದ ಕಾರಣ ಯಾವ ಆಸ್ಪತ್ರೆಯಲ್ಲಿಯೂ ಈಕೆಗೆ ಚಿಕಿತ್ಸೆ ಸಿಗಲೇ ಇಲ್ಲ. ಸರಕಾರದ ನಿರ್ಲಕ್ಷö್ಯದಿಂದಲೇ ಚಾಂದಿನಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಇದೀಗ ಸುದ್ದಿಯಾಗುತ್ತಲೇ ಇದೆ.

ಕೊನೆಗೆ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಚಾಂದಿನಿಯನ್ನು ಕುಟುಂಬಸ್ಥರು ಕೊಂಡೊಯ್ದರು. ಆದ್ರೆ ಅಲ್ಲಿಯ ಸಿಬ್ಬಂದಿಗಳು ಸರಿಯಾಗಿ ಪರೀಕ್ಷಿಸದೇ 2 ಡೋಲೋ ಮಾತ್ರೆಗಳನ್ನು ನೀಡಿ, ಒಂದು ಜೀವದ ಜೊತೆ ಚೆಲ್ಲಾಟವಾಗಿದ್ದಾರೆ ಎಂಬ ಆರೋಪಗಳಿವೆ. ಬರೋಬ್ಬರೀ 35 ವರ್ಷಗಳಿಂದ ಅದೆಷ್ಟೋ ಆಸೆ ಹೊತ್ತು ಸಾವು-ಬದುಕಿನ ಹೋರಾಟ ನಡೆಸಿದ ಚಾಂದಿನಿ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ.

ಮೃತರು ಅತ್ತೆ ಸರೋಜಿನಿ, ಪತಿ ಪರುಷೋತ್ತಮ್, ಪುತ್ರಿ ಚಾನ್ವಿ ಅವರನ್ನು ಅಗಲಿದ್ದಾರೆ.

ಚಾಂದಿನಿ ಅವರ ಮೃತದೇಹವನ್ನು ಸುಳ್ಯದ ನಾವೂರು ಮನೆಗೆ ತರಲಾಗಿದೆ. ಇಂದು ಪತಿಯ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

Exit mobile version