
ಉಳ್ಳಾಲ: ಮಂಜನಾಡಿ ಗುಡ್ಡ ಕುಸಿತ ದುರ್ಘಟನೆ ಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಮತ್ತು ಕಾಲನ್ನು ಕಳೆದುಕೊಂಡ ಸಂತ್ರಸ್ತೆ ಯಾದ ಅಶ್ವಿನಿ ಯವರಿಗೆ ಆರ್ಥಿಕ ನೆರವಿನ ಸದುದ್ಧೇಶದಿಂದ ತೊಕ್ಕೊಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವತಿಯಿಂದ ಪರಿಹಾರ ನಿಧಿ ಸ್ಥಾಪನೆ ಮಾಡಿ ಸುಮಾರು 3 ಲಕ್ಷ ರೂಪಾಯಿ ಆರ್ಥಿಕ ಸಹಾಯ ವನ್ನು ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ ರವರು ಅಶ್ವಿನಿ ಯವರ ತವರು ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ವೇದಿಕೆಯ ಕಾರ್ಯಾಧ್ಯಕ್ಷರಾದ ಸತೀಶ್ ಕರ್ಕೇರ, ದತ್ತು ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೊಟು, ಸ್ಥಳೀಯರಾದ ಚಂದ್ರಹಾಸ ಅಮೀನ್ ಜತೆಯಲ್ಲಿದ್ದರು. ಸಂತ್ರೆಸ್ತೆಯ ಸಹೋದರ ಪವನ್ ಹರೇಕಳ, ತಂದೆ ಮತ್ತು ತಾಯಿ ಉಪಸ್ಥಿತರಿದ್ದರು.