Site icon Ullalavani

ಚೌತಿ ಗ್ರಾ.ಪಂ.ಪಿಡಿಒ ಆಗಿ ಮಹೇಶ್ ಅಧಿಕಾರ ಸ್ವೀಕಾರ

ಪಿರಿಯಾಪಟ್ಟಣ; ಪಿರಿಯಾಪಟ್ಟಣ ತಾಲ್ಲೂಕಿನ ಚೌತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಮಹೇಶ್‌ರವರು ಅಧಿಕಾರ ಸ್ವೀಕರಿಸಿದರು. ಚೌತಿ ಗ್ರಾಮ ಪಂಚಾಯಿತಿಯಲ್ಲಿ ಮೋಹನ್ ಕುಮಾರ್‌ರವರು ಕಳೆದ 8ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಮೋಹನ್ ಕುಮಾರ್‌ರವರು ಮಹೇಶ್‌ಗೆ ಅಧಿಕಾರ ಹಸ್ತಾಂತರಿಸಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಮಹೇಶ್, ಈಗಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮಹೇಶ್‌ರವರು ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆ ತಾಲೂಕಿನ ನೀಡುವಾಳೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 4ವರ್ಷ ಸೇವೆ ಸಲ್ಲಿಸಿ ಚೌತಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ ಎಂದರು.

ಚೌತಿ ಗ್ರಾಮ ಪಂಚಾಯಿತಿಯಲ್ಲಿ 8ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್‌ರವರನ್ನು ಮಾಲಂಗಿ ಗ್ರಾಮ ಪಂಚಾಯಿತಿಗೆ ಕೌನ್ಸಿಲಿಂಗ್ ಮುಖಾಂತರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ನೌಕರವರ್ಗದವರು ಹೃದಯಪೂರ್ವಕ ಬೀಳ್ಕೊಡುಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ರಾಜೇಶ್ವರಿ,ಸದಸ್ಯರುಗಳಾದ ರವಿಚಂದ್ರ,ರಘು ಹಬಟೂರು, ಸ್ವಾಮಿ ಅಓ.ಲಕ್ಷ್ಮಣ್ ಪಟೇಲ್, ಶೇಖರ್, ರಾಮೇಗೌಡ್ರು, ಶೃತಿ, ಯಮುನಾ, ಗೌರಿ, ಶೃತಿ ಸಿ ಕೆ, ಚಂದ್ರಕಲಾ, ಶಾರದಾ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ರು.

Exit mobile version