
ತೊಕ್ಕೊಟ್ಟು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸಂಘ ಶತಾಬ್ದಿ ಆಚರಣೆಯ ಅಂಗವಾಗಿ ಪಥಸಂಚಲನ ಕಾರ್ಯಕ್ರಮವು ನಡೆಯಿತು. ತೊಕ್ಕೊಟ್ಟು ಚೆಂಬುಗುಡ್ಡೆಯ ರಾಷ್ಟ್ರೋತ್ಥಾನ ಶಾಲೆಯಿಂದ ಪ್ರಾರಂಭಗೊಂಡ ಈ ಪಥಸಂಚಲನವು ಕಾಪಿಕಾಡು ಮಾರ್ಗವಾಗಿ ತೊಕ್ಕೊಟ್ಟು, ಕೆರೆಬೈಲು ಮಾರ್ಗದ ಮೂಲಕ ವಾಪಸ್ಸು ರಾಷ್ಟ್ರೋತ್ಥಾನದಲ್ಲಿ ಸಮಾಪ್ತಿಗೊಂಡಿತು.
ಶಿಸ್ತು, ಸಮನ್ವಯ ಮತ್ತು ದೇಶಭಕ್ತಿಯ ಮೆರಗು ತೋರಿಸಿದ ಈ ಪಥಸಂಚಲನದಲ್ಲಿ ೧,೦೦೦ ಕ್ಕೂ ಹೆಚ್ಚು ಸ್ವಯಂಸೇವಕರು ಶಿಸ್ತುಬದ್ಧವಾಗಿ ಭಾಗವಹಿಸಿ ರಾಷ್ಟ್ರಪ್ರೇಮದ ಸಂದೇಶ ಹರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಕಾರ್ಯಕರ್ತರು, ಹಿರಿಯರು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡರು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.