Site icon Ullalavani

ಹಾಪ್‌ಕಾಮ್ಸ್‌ : ನೂತನ ಅಧ್ಯಕ್ಷರಾಗಿ ಪ್ರಶಾಂತ್ ಎ ಗಟ್ಟಿ ಆಯ್ಕೆ

ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ ಕಾಮ್ಸ್) ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೆಶಕರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಮಂಗಳೂರು ತಾಲೂಕಿನ ಪ್ರಶಾಂತ್ ಎ ಗಟ್ಟಿ ಮತ್ತು ಉಪಾಧ್ಯಕ್ಷರಾಗಿ ಪುತ್ತೂರು ತಾಲೂಕಿನ ಸಚಿನ್ ಕುಮಾರ್ ಬಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಅಧ್ಯಕ್ಷರು/ಉಪಾಧ್ಯಕ್ಷರ ಆಯ್ಕೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ. ನೆರವೇರಿಸಿಕೊಟ್ಟರು. ಸಭೆಯಲ್ಲಿ ನಿರ್ದೆಶಕರುಗಳಾದ ಜಯಪ್ರಕಾಶ್ ಕೂಜುಗೋಡು, ಜಯಕುಮಾರ್ ಪರ್ಕಳ, ಹರೀಶ್, ಯಶೋಧರ ಶೆಟ್ಟಿ ಬಿ, ಕೆ. ಲಕ್ಷ್ಮೀನಾರಾಯಣ ಉಡುಪ, ಸೀತಾರಾಮ ಗಾಣಿಗ, ರತ್ನರಾಜ್ ಪಿ, ಅನಂತ ಪದ್ಮನಾಭ ಉಡುಪ ಕೆ, ವಿಜಯ ರೈ, ಚೀಂಪ, ಸುಂದರ ನಾಯ್ಕ, ನಿರ್ಮಲ, ಮಮತಾ ಎಂ ಶೆಟ್ಟಿ, ಸುಭದ್ರಾ ರಾವ್ ಉಪಸ್ಥಿತರಿದ್ದರು.
ವ್ಯವಸ್ಥಾಪಕ ನಿರ್ದೇಶಕರು ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರಾಗಿರುವ ಕೆ. ಪ್ರವೀಣ ಇವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೆಶಕರುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ವ್ಯವಸ್ಥಾಪಕರಾದ ರವಿಚಂದ್ರ ಶೆಟ್ಟಿಯವರು ಧನ್ಯವಾದವನ್ನು ಸಲ್ಲಿಸಿದರು.

Exit mobile version