
ತೊಕ್ಕೊಟ್ಟು: ಇಲ್ಲಿನ ಪೆರ್ಮನ್ನೂರು ಹೋಲಿ ಏಂಜಲ್ಸ್ ಹೈಯರ್ ಪ್ರೈಮರಿ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಫಿಲೋಮಿನಾ ಅವರ ಮೊಬೈಲ್ ನಂಬರನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಹಣ ಕೇಳಿದಲ್ಲಿ ಯಾರೂ ಪಾವತಿಸದಂತೆ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಕಾನೂನು ಪ್ರಕ್ರಿಯೆಗಳನ್ನು ನಡೆಸಿರುವ ಸಿಸ್ಟರ್ ಅವರು ತನ್ನ ಮೊಬೈಲ್ ಸಂಖ್ಯೆಯಲ್ಲಿ ಸಂದೇಶ ಬಂದಲ್ಲಿ ಯಾರು ಕೂಡ ಸ್ಪಂಧಿಸುವುದು ಬೇಡ ಎಂದು ಸಾರ್ವಜನಿಕವಾಗಿ ಮಾಹಿತಿ ನೀಡಿದ್ದಾರೆ.