ತೊಕ್ಕೊಟ್ಟು : ಸ್ವಾತಂತ್ರ್ಯ ಹೋರಾಟಗಾರ ನರಿಂಗಾನ ಗ್ರಾಮದ ಸೌರ್ಕುಡೇಲು ದಿವಂಗತ ಮಹಾಬಲೇಶ್ವರ ಭಟ್ ಅವರ ಧರ್ಮಪತ್ನಿ ಸರಸ್ವತಿ ಭಟ್ (95) ಗುರುವಾರ ಮಂಗಳೂರಿನಲ್ಲಿರುವ ಮಗಳ ಮನೆಯಲ್ಲಿ ವಯೋ ಸಹಜ ಸಾವಿಗೀಡಾದರು.
ಪತಿಯ ಆದರ್ಶ ಪರಿಪಾಲಿಸುತ್ತ ಮಹಿಳೆಯರು ಸ್ವಾವಲಂಬಿ ಬದುಕು ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ನರಿಂಗಾನ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹೊಲಿಗೆ ತರಬೇತಿ ಕೇಂದ್ರ, ಮಹಿಳಾ ಮಂಡಲ ಸ್ಥಾಪನೆ, ನರಿಂಗಾನ ಶಾಲೆ ಸೇರಿದಂತೆ ವಿವಿಧ ಭಾಗದಲ್ಲಿ ಸಮಾಜ ಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕೀರ್ತಿ ಸರಸ್ವತಿ ಭಟ್ ಅವರಿಗೆ ಸಲ್ಲುತ್ತದೆ.
ಮಕ್ಕಳಾದ ಡಾ. ಉದಯ ಶಂಕರ ಭಟ್, ಡಾ. ಮಾಧವಿ ಭಟ್, ಡಾ. ಗಾಯತ್ರಿ ಭಟ್ , ಡಾ. ವೈಜಯಂತಿ ಭಟ್ , ಡಾ. ವಿನಯ ಪೂರ್ಣಿಮ ಭಟ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.