Site icon Ullalavani

ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಶ್ರೀ ಶಾರದಾ ನಿಕೇತನ ಉಳ್ಳಾಲದ ವತಿಯಿಂದ ಸಾಮೂಹಿಕ ಪ್ರಾರ್ಥನೆಗೆ ಕರೆ

ಉಳ್ಳಾಲ : 78 ವರ್ಷಗಳಿಂದಲೂ ಉಳ್ಳಾಲದ ಸಮಸ್ತ ಹಿಂದುಗಳು ಸೇರಿ ಶೃದ್ದಾ ಭಕ್ತಿಯಿಂದ ಉಳ್ಳಾಲ ಶ್ರೀ ಶಾರದಾ ಉತ್ಸವವನ್ನು ಆಚರಿಸುತ್ತಾ ಇದ್ದೇವೆ. ಈ ಸಲದ ಉತ್ಸವದ ಮೆರವಣಿಗೆಯಲ್ಲಿ ಶ್ರೀ ಶಾರದಾ ಮಾತೆಗೆ ಹಾಗೂ ಸಮಸ್ತ ಹಿಂದೂ ಸಮಾಜಕ್ಕೆ ಧಕ್ಕೆಯಾಗುವಂತಹ ಘಟನೆಯು ನಡೆದು ಹೋಗಿರುವುದು ಹಿಂದುಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಎಲ್ಲರಿಗೂ ದುಃಖ ಆಗಿದೆ. ಈ ದುಃಖವನ್ನು ನಾವುಗಳು ನಾವು ನಂಬಿದ ದೈವ ದೇವರುಗಳ ಎದುರು ಪ್ರಾರ್ಥಿಸಿ ಈ ಘಟನೆಯ ಬಗ್ಗೆ ದೈವದೇವರುಗಳೇ ತೀರ್ಮಾನವನ್ನು ಕೊಡಲಿ ಎಂದು ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ದೈವಸ್ಥಾನ ದೇವಸ್ಥಾನಗಳಲ್ಲಿ ಅ.5 ಸಂಜೆ 6 ಗಂಟೆಗೆ ಸರಿಯಾಗಿ ಸಾಮೂಹಿಕ ಪ್ರಾರ್ಥನೆಗೆ ಸಾರ್ವಜನಿಕ ನವರಾತ್ರಿ ಶ್ರೀ ಶಾರದಾ ಉತ್ಸವ ಸಮಿತಿ ಶ್ರೀ ಶಾರದಾ ನಿಕೇತನ ಉಳ್ಳಾಲ ಕರೆ ನೀಡಿದೆ.
ಪ್ರತೀ ಹಿಂದೂ ಭಾಂಧವರು ಈ ಸಮಯದಲ್ಲಿ ಹತ್ತಿರದ ದೇವಸ್ಥಾನ, ದೈವಸ್ಥಾನಗಳಿಗೆ ಹೋಗಿ ಪ್ರಾರ್ಥನೆ ಮಾಡಬೇಕಾಗಿದೆ. ಆಯಾಯ ದೇವಸ್ಥಾನಗಳ ಜವಾಬ್ದಾರಿಯನ್ನು ಈ ಕೆಳಗಿನವರಿಗೆ ನೀಡಲಾಗಿದೆ. ಎಲ್ಲರೂ ಸಹಕರಿಸಬೇಕಾಗಿ ವಿನಂತಿ. ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಮೊಗವೀರ ಪಟ್ಣ ಉಳ್ಳಾಲ-  ಯಶವಂತ ಅಮೀನ್ ಮತ್ತು ಗುರುಪ್ರಸಾದ್ ಬಂಗೇರ., ಲಕ್ಷ್ಮೀ ನರಸಿಂಹ ದೇವಸ್ಥಾನ ಮುಖ್ಯರಸ್ತೆ ಉಳ್ಳಾಲ –  ಶ್ರೀಕರ ಕಿಣಿ ಮತ್ತು  ಗಣೇಶ್ ಭಟ್,  ಧರ್ಮರಸರ ಕ್ಷೇತ್ರ ಉಳಿಯ –  ಯೋಗೀಶ್ ಉಳ್ಳಾಲ್ ಮತ್ತು  ಸುಂದರ ಉಳಿಯ,  ವೀರಭಧ್ರ ದುರ್ಗಾ ಪರಮೇಶ್ವರಿ ದೇವಸ್ಥಾನ –  ಮೀರಾ ಶೆಟ್ಟಿಗಾರ್ ಮತ್ತು  ಲತಾ ಶೆಟ್ಟಿಗಾರ್, ಶ್ರೀ ಮಲರಾಯ ದೇವಸ್ಥಾನ ಬಂಡಿಕೊಟ್ಯ-  ಉದಯ್ ಆರ್ ಕೆ ಮತ್ತು  ಪದ್ಮನಾಭ ಬಂಡಿಕೊಟ್ಯ, ಶ್ರೀ ಸೋಮೇಶ್ವರ ದೇವಸ್ಥಾನ ಸೋಮೇಶ್ವರ –  ವಿಶ್ವನಾಥ್ ನಾಯಕ್ ಮತ್ತು  ಆನಂದ ಧರ್ಮನಗರ, ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲ್ –  ಕಾಂಚನ್ ಕೆ ಮತ್ತು  ಮಾಧವಿ ಉಳ್ಳಾಲ್, ಶ್ರೀ ನಾಗಬ್ರಹ್ಮಾದಿ ಪಂಚದೈವಿಕ ಸನ್ನಿಧಿ ಶ್ರೀ ಶಾರದಾ ನಿಕೇತನ ಉಳ್ಳಾಲದಲ್ಲಿ ಪ್ರಾರ್ಥನೆ ಮಾಡುವ ಜವಾಬ್ದಾರಿ-  ಸತೀಶ್ ಬಂಡಿಕೊಟ್ಯ ಮತ್ತು  ಉದಯ ಗೋಳಿಯಡಿ., ಶ್ರೀ ಅಯ್ಯಪ್ಪ ಭಜನಾ ಮಂದಿರ ಧರ್ಮಶಾಸ್ತ ನಗರ ಉಳಿಯ ರಸ್ತೆ ಪ್ರಾರ್ಥನೆ ಮಾಡುವ ಜವಾಬ್ದಾರಿ- ದಿನೇಶ್ ಟಿ.ಡಿ ಮತ್ತು  ಯೋಗೀಶ್ ಟಿಡಿ, ಶ್ರೀ ವಲಚ್ಚಿಲತ್ತಾಯ ದೇವಸ್ಥಾನ ಬಂಡಿಕೊಟ್ಯ ಇಲ್ಲಿ ಪ್ರಾರ್ಥನೆ ಮಾಡುವ ಜವಾಬ್ದಾರಿ-  ಶ್ರೀಕಾಂತ್ ಅರಸುಹಿತ್ಲು ಮತ್ತು ರೇಣುಕಾ ಕಾಂಚನ್, ಶ್ರೀ ವೈದ್ಯನಾಥ ದೇವಸ್ಥಾನ ಉಳ್ಳಾಲ ಬೈಲು, ಶ್ರೀ ಗುಳಿಗ ಬನ ಒಂಭತ್ತುಕೆರೆ, ಶ್ರೀ ಕೊರಗಜ್ಜ , ಶ್ರೀ ಗುಳಿಗಜ್ಜ ಕ್ಷೇತ್ರ, ಉಳ್ಳಾಲ ಬಸ್ ಸ್ಟ್ಯಾಂಡ್ ಎಲ್ಲಾ ಭಜನಾ ಮಂದಿರಗಳಲ್ಲೂ ಪ್ರಾರ್ಥನೆ ಸಲ್ಲಿಸಬೇಕಾಗಿ ವಿನಂತಿಸಿದ್ದಾರೆ. 

Exit mobile version